ಮೈಸೂರು(ಸೆ.14): ಪ್ರೀತಿಸುವಂತೆ ಕಿರುಕುಳ ನೀಡಿದ್ದ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯೋರ್ವಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಅಂಕನಹಳ್ಳಿಯಲ್ಲಿ ನಡೆದಿದೆ.

ಮೈಸೂರಿ ಜೆಎಸ್'ಎಸ್ ಕಾಲೇಜಿನ ಪಿಯುಸಿ ವಿದ್ಯಾರ್ಥಿನಿ ಸೌಂದರ್ಯ ಎಂಬಾಕೆ ಆತ್ಮಹತ್ಯೆಗೆ ಶರಣಾಗಿದ್ದು, ಈಕೆಗೆ ಮನುಗನಹಳ್ಳಿಯ ಕಿರಣ್ ಎಂಬಾತ 'ನನ್ನನ್ನು ಪ್ರೀತಿಸು, ಇಲ್ಲವಾದರೆ ನಿನ್ನನ್ನು ಕೊಲೆ ಮಾಡುತ್ತೇನೆ' ಎಂದು ಬೆದರಿಕೆ ಹಾಕಿದ್ದ. ಈ ವಿಚಾರವನ್ನು ತನ್ನ ಪೋಷಕರಿಗೂ ತಿಳಿಸಿದ್ದು, ಅವರು ಆಖೆಗೆ ಸಮಾಧಾನ ಮಾಡಿದ್ದರು. ಆದರೆ ಯುವಕನ ಉಪಟಳ ಜಾಸ್ತಿಯಾಗಿದ್ದರಿಂದ ಮನನೊಂದ ಸೌಂದರ್ಯ ಬೆಂಕಿ ಹಚ್ಚಿಕೊಂಡಿದ್ದಳು.

ತೀವ್ರ ಸುಟ್ಟ ಗಾಯಗಳಾಗಿದ್ದ ಆಕೆಯನ್ನು ಆಸ್ಪತ್ರೆಗೆ ದಾಖಲಾಯಿಸಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ. ಇದೀಗ ಇಲ್ಲಿನ ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.