ಜಮ್ಮುವಿನಲ್ಲಿ ರಾಜ್ಯಪಾಲರ ಆಡಳಿತ ಜಾರಿಯಾಗುತ್ತಿದ್ದಂತೆ ಮಹತ್ವದ ಬದಲಾವಣೆ

Top Islamic State terrorist among four militants killed
Highlights

ರಾಜ್ಯಪಾಲರ ಆಳ್ವಿಕೆ ಜಾರಿ ಆಗುತ್ತಿದ್ದಂತೆ ಜಮ್ಮು-ಕಾಶ್ಮೀರದಲ್ಲಿ ಉಗ್ರರ ವಿರುದ್ಧದ  ಕಾರ್ಯಚರಣೆಯನ್ನು ಭದ್ರತಾ ಪಡೆಗಳು ತೀವ್ರಗೊಳಿಸಿವೆ. ಅನಂತನಾಗ್ ಜಿಲ್ಲೆಯಲ್ಲಿ ಶುಕ್ರವಾರ ಐಸಿಸ್ ಸಂಘಟನೆಯ ಜಮ್ಮು-ಕಾಶ್ಮೀರ ಘಟಕದ ಮುಖ್ಯಸ್ಥ ಸೇರಿ ನಾಲ್ಕು ಉಗ್ರಗಾಮಿಗಳನ್ನು ಕೊಂದು ಹಾಕಿವೆ. 

ಶ್ರೀನಗರ: ರಾಜ್ಯಪಾಲರ ಆಳ್ವಿಕೆ ಜಾರಿ ಆಗುತ್ತಿದ್ದಂತೆ ಜಮ್ಮು-ಕಾಶ್ಮೀರದಲ್ಲಿ ಉಗ್ರರ ವಿರುದ್ಧದ  ಕಾರ್ಯಚರಣೆಯನ್ನು ಭದ್ರತಾ ಪಡೆಗಳು ತೀವ್ರಗೊಳಿಸಿವೆ. ಅನಂತನಾಗ್ ಜಿಲ್ಲೆಯಲ್ಲಿ ಶುಕ್ರವಾರ ಐಸಿಸ್ ಸಂಘಟನೆಯ ಜಮ್ಮು-ಕಾಶ್ಮೀರ ಘಟಕದ ಮುಖ್ಯಸ್ಥ ಸೇರಿ ನಾಲ್ಕು ಉಗ್ರಗಾಮಿಗಳನ್ನು ಕೊಂದು ಹಾಕಿವೆ. 

ಒಂದೆಡೆ ಭಯೋತ್ಪಾದಕರ ವಿರುದ್ಧ ಯೋಧರು ಗುಂಡಿನ ಚಕಮಕಿ ನಡೆಸು ತ್ತಿದ್ದಾಗ ಕಾಶ್ಮೀರಿ ಯುವಕರ ಗುಂಪೊಂದು ಸೈನಿಕರತ್ತ ಕಲ್ಲು ತೂರಿದ ಘಟನೆಯೂ ನಡೆದಿದೆ. ಭದ್ರತಾ ಪಡೆಗಳು ಬಲ ಪ್ರಯೋಗಿಸಿ ಈ ಯುವಕರನ್ನು ಚದುರಿಸಿ, ಭಯೋ ತ್ಪಾದಕರನ್ನು ಸದೆಬಡಿಯುವಲ್ಲಿ ಸಫಲ ವಾಗಿವೆ.

ವಾರ್ಷಿಕ ಅಮರನಾಥ ಯಾತ್ರೆ ಆರಂಭಕ್ಕೆ ಕೇವಲ ಆರು ದಿನ ಮುನ್ನಾ ಈ ಕಾರ್ಯಾಚರಣೆ ನಡೆದಿದ್ದು, ನಿಷೇಧಿತ ಇಸ್ಲಾಮಿಕ್ ಸ್ಟೇಟ್ ಜಮ್ಮು-ಕಾಶ್ಮೀರ (ಐಸಿಸ್ ಶಾಖೆ) ಮುಖ್ಯಸ್ಥ ದಾವೂದ್ ಅಹಮದ್ ಸೋಫಿ ಎಂಬಾತ ಕೂಡ ಹತರಾದ ಉಗ್ರರಲ್ಲಿ ಸೇರಿದ್ದಾನೆ. 33 ವರ್ಷ ವಯಸ್ಸಿನ ಈತ ಹಲವು ಕೊಲೆ ಹಾಗೂ ಕಲ್ಲು ತೂರಾಟ ಪ್ರಕರಣ ಗಳಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ. ಈತನ ಜತೆಗೇ ಹತ್ಯೆ ಗೀಡಾ ಗಿರುವ ಮೂವರೂ ಐಸಿಸ್ ಕಾಶ್ಮೀರ ಘಟಕದಲ್ಲಿ ಗುರುತಿಸಿಕೊಂಡಿದ್ದರು ಎನ್ನಲಾಗಿದೆ. 

ವಿಶೇಷವೆಂದರೆ ರಾಜ್ಯದಲ್ಲಿ ಸಕ್ರಿಯರಾಗಿರುವ 21 ಉಗ್ರರನ್ನು ಸೆರೆಹಿಡಿಯಲು ಸೇನೆ ಪಟ್ಟಿಯೊಂದನ್ನು ಸಿದ್ಧಪಡಿಸಿತ್ತು. ಅದರಲ್ಲಿ ದಾವೂದ್ ಕೂಡಾ ಸೇರಿದ್ದ. ಹೀಗಾಗಿ 21 ಜನರ ಪೈಕಿ ಮೊದಲಿಗೆ ಆತನೇ ಹತನಾಗಿದ್ದಾನೆ. ದಾವೂದ್ ಅಲ್ಲದೆ ಇತರೆ ಮೂವರು ಉಗ್ರರನ್ನು ಯೋಧರು ಕೊಂದು ಹಾಕಿದ್ದಾರೆ. ಈ ಕಾರ್ಯಾಚರಣೆ ಸಂದರ್ಭದಲ್ಲಿ ಒಬ್ಬ ಪೊಲೀಸ್ ಸಿಬ್ಬಂದಿ ಹಾಗೂ ಒಬ್ಬ ನಾಗರಿಕ ಕೂಡ ಮೃತಪಟ್ಟಿದ್ದಾರೆ. 

ಅನಂತನಾಗ್ ಜಿಲ್ಲೆಯ ಶ್ರೀಗುಫ್ವಾರಾ ಎಂಬಲ್ಲಿ ನಾಲ್ವರು ಭಯೋತ್ಪಾದಕರು ಅಡಗಿ ಕುಳಿತಿದ್ದಾರೆ ಎಂಬ ಮಾಹಿತಿ ಮೇರೆಗೆ ಭದ್ರತಾ ಪಡೆಗಳು ಸ್ಥಳಕ್ಕೆ ಧಾವಿಸಿದವು. ಆಗ ಭಯೋತ್ಪಾದಕರು ಗುಂಡಿನ ದಾಳಿ ಆರಂಭಿಸಿದರು. ಯೋಧರೂ ಪ್ರತಿ ದಾಳಿ ನಡೆಸಿದಾಗ ನಾಲ್ವರೂ ಉಗ್ರರು ಹಗರಾದರು.

loader