ಪೊಲೀಸ್ ಎನ್‌ಕೌಂಟರ್‌ಗೆ ನಾಲ್ಕು ಶಂಕಿತ ಭೂಗತ ಪಾತಕಿಗಳು ಮಟಾಶ್.!

Top Gangster Among 4 Killed In Fierce Gunfight With Cops
Highlights

ನವದೆಹಲಿಯಲ್ಲಿ ಪೊಲೀಸರಿಂದ ಭೀಕರ ಎನ್‌ಕೌಂಟರ್

ದಕ್ಷಿಣ ದೆಹಲಿಯ ಚತಾರಪುರ್ ಪ್ರದೇಶದಲ್ಲಿ  ಘಟನೆ

ನಾಲ್ಕು ಮಂದಿ ಶಂಕಿತ ಭೂಗತ ಪಾತಕಿಗಳು ಖತಂ

ಕೊಲೆ, ಸುಲಿಗೆ, ಬೆದರಿಕೆ ಹಲವು ಪ್ರಕರಣಗಳಲ್ಲಿ ಭಾಗಿ

 

ನವದೆಹಲಿ(ಜೂನ್.9): ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಪೊಲೀಸರು ಭೀಕರ ಎನ್‌ಕೌಂಟರ್ ಮಾಡಿದ್ದು, ಘಟನೆಯಲ್ಲಿ ಶಂಕಿತ 4 ಮಂದಿ ಭೂಗತ ಪಾತಕಿಗಳು ಹತರಾಗಿದ್ದಾರೆ.

ದಕ್ಷಿಣ ದೆಹಲಿಯ ಚತಾರಪುರ್ ಪ್ರದೇಶದಲ್ಲಿ ದೆಹಲಿ ಪೊಲೀಸ್ ವಿಶೇಷ ಘಟಕದ ಸಿಬ್ಬಂದಿ ಈ ಎನ್‌ಕೌಂಟರ್ ಮಾಡಿದ್ದು, ಈ ವೇಳೆ ನಾಲ್ಕು ಮಂದಿ ಶಂಕಿತ ಭೂಗತ ಪಾತಕಿಗಳು ಹತರಾಗಿದ್ದಾರೆ. ಅಂತೆಯೇ ಮೂವರು ಪೊಲೀಸರಿಗೂ ಘಟನೆಯಲ್ಲಿ ಗಾಯಗಳಾಗಿವೆ ಎಂದು ತಿಳಿದುಬಂದಿದೆ. 

ಇನ್ನು ಪೊಲೀಸ್ ಎನ್ ಕೌಂಟರ್ ನಲ್ಲಿ ಹತರಾದ ಶಂಕಿತರು ಭೂಗತ ಪಾತಕಿ ರಾಜೇಶ್ ಭಾರ್ತಿ ಗ್ಯಾಂಗ್‌ನವರು ಎಂದು ಶಂಕಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ದೆಹಲಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. 

ಪ್ರಸ್ತುತ ಹತರಾದ ಶಂಕಿತ ಪಾತಗಳ ಮೇಲೆ ಪೊಲೀಸ್ ಇಲಾಖೆ ನಗದು ಬಹುಮಾನ ಘೋಷಣೆ ಮಾಡಿತ್ತು. ಇನ್ನು ಭೂಗತ ಪಾತಕಿ ರಾಜೇಶ್ ಭಾರ್ತಿ ವಿರುದ್ಧ ಕೊಲೆ, ಸುಲಿಗೆ, ಬೆದರಿಕೆ ಸೇರಿದಂತೆ  ಹಲವು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

loader