Asianet Suvarna News Asianet Suvarna News

'ಸಿದ್ದಲಿಂಗ ಸ್ವಾಮಿಗಳ ಆದರ್ಶದಿಂದ ಇಸ್ಲಾಂ ಧರ್ಮ ಬಿಟ್ಟು ಸನ್ಯಾಸಿ ಆಗಿದ್ದೇನೆ'

ತೋಂಟದಾರ್ಯ ಸಿದ್ದಲಿಂಗ ಸ್ವಾಮಿಗಳನ್ನು ನೆನೆದು ಜೇವರ್ಗಿಯ ಸಿದ್ದಬಸವ ಕಬೀರ ಶ್ರೀಗಳು ಭಾವುಕರಾಗಿ ಮಾತನಾಡಿದ್ದು, ಸಿದ್ದಲಿಂಗ ಸ್ವಾಮಿಗಳ ಜೊತೆಗಿನ ಒಡನಾಟವನ್ನು ಹಂಚಿಕೊಂಡಿದ್ದು ಹೀಗೆ.

Tontadarya siddalinga swamiji inspired me says Jevargi Siddabasava Swamy
Author
Bengaluru, First Published Oct 21, 2018, 3:08 PM IST

ಗದಗ, (ಅ.21): ಗದಗ ತೋಂಟದಾರ್ಯ ಸಿದ್ದಲಿಂಗ ಸ್ವಾಮಿಗಳನ್ನು ನೆನೆದು ಜೇವರ್ಗಿಯ ಸಿದ್ದಬಸವ ಕಬೀರ ಶ್ರೀಗಳು ಭಾವುಕರಾಗಿ ಮಾತನಾಡಿದ್ದಾರೆ.

 ಸಿದ್ದಲಿಂಗ ಸ್ವಾಮಿ ಅವರಿಗೆ ನುಡಿ ನಮನ ಸಲ್ಲಿಸುವ ವೇಳೆ ಭಾವುಕಾಗಿ ಮಾತನಾಡಿದ ಜೇವರ್ಗಿಯ ಸಿದ್ದಬಸವ ಕಬೀರ ಶ್ರೀಗಳು, ಸಿದ್ದಲಿಂಗ ಸ್ವಾಮಿಗಳ ಉಪನ್ಯಾಸ ಕೇಳಿ ಇಸ್ಲಾಂ ಧರ್ಮ ಬಿಟ್ಟು ಬಂದು ಸನ್ಯಾಸಿ ಆಗಿದ್ದೇನೆ. ಜೇವರ್ಗಿಯಲ್ಲಿರುವ ನನ್ನ ಮಠಕ್ಕೆ ಆಗಾಗ ಬರುತ್ತಿದ್ದರು ಎಂದು ಸಿದ್ದಲಿಂಗ ಸ್ವಾಮಿಗಳನ್ನು ನೆನೆದು ಭಾವುರಾದರು.

ಗದಗ ತೋಂಟದಾರ್ಯ ಮಠಕ್ಕೆ ನೂತನ ಉತ್ತರಾಧಿಕಾರಿ ನೇಮಕ

ಮೂಲಭೂತ ವಾದಿಗಳು ನನಗೆ ತೊಂದರೆ ಕೊಡುತ್ತಿದ್ದಾರೆ ಎಂದು ಹೇಳಿದರೆ, ನೀನು ಅದರ ಬಗ್ಗೆ ತೆಲೆಕೆಡಿಸಿಕೊಳ್ಳಬೇಡ. ನನ್ನ ಮೇಲೇಯೇ ಕಲ್ಲು ಎಸೆದಿದ್ದು, ಯಾರನ್ನು ಬಿಟ್ಟಿಲ್ಲ ಭಯ ಪಡಬೇಡ.

ಬಸವಣ್ಣನನ್ನು ಮುಂದಿಟ್ಟುಕೊಂಡು ಸಾಗು ಎಂದು ಧೈರ್ಯ ತುಂಬಿದ್ದರು ಎಂದು ಸಿದ್ದಬಸವ ಕಬೀರ ಶ್ರೀಗಳು ಸಿದ್ದಲಿಂಗ ಸ್ವಾಮಿಗಳನ್ನ ನೆನಪಿಸಿಕೊಂಡರು.

Follow Us:
Download App:
  • android
  • ios