. ಕೃಷ್ಣ ಅವರ ಜೊತೆ ಆರ್. ಅಶೋಕ್ ಕೂಡ ರಾಷ್ಟ್ರ ರಾಜಧಾನಿಗೆ ತೆರಳಲಿದ್ದಾರೆ. ಪಕ್ಷಕ್ಕೆ ಸೇರ್ಪಡೆಗೊಂಡ ನಂತರ ಬಿಜೆಪಿ ಕಚೇರಿಯಲ್ಲಿ ಅದ್ಧೂರಿ ಸ್ವಾಗತ ನಡೆಯಲಿದೆ.

ಬೆಂಗಳೂರು(ಮಾ.21): ನಾಳೆಯಿಂದ ಬಿಜೆಪಿಯಲ್ಲಿ ಕೃಷ್ಣ ಪರ್ವ ಆರಂಭವಾಗಲಿದ್ದು, ಕಾಂಗ್ರೆಸ್'ನ ಮಾಜಿ ನಾಯಕ ಎಸ್.ಎಂ. ಕೃಷ್ಣ ಅವರು ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ.

ನಾಳೆ ಬೆಳಿಗ್ಗೆ ದೆಹಲಿಗೆ ತೆರಳಿರುವ ಅವರು ಸಂಜೆ 5 ಗಂಟೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನೇತೃತ್ವದಲ್ಲಿ ಬಿಜೆಪಿಗೆ ಸೇರಲಿದ್ದಾರೆ. ಕೃಷ್ಣ ಅವರ ಜೊತೆ ಆರ್. ಅಶೋಕ್ ಕೂಡ ರಾಷ್ಟ್ರ ರಾಜಧಾನಿಗೆ ತೆರಳಲಿದ್ದಾರೆ. ಪಕ್ಷಕ್ಕೆ ಸೇರ್ಪಡೆಗೊಂಡ ನಂತರ ಬಿಜೆಪಿ ಕಚೇರಿಯಲ್ಲಿ ಅದ್ಧೂರಿ ಸ್ವಾಗತ ನಡೆಯಲಿದೆ.