ಯಲಹಂಕದಲ್ಲಿರುವ ಏರ್'ಫೋರ್ಸ್'ಗೆ ಪಾರ್ಥಿವ ಶರೀರ ತಲುಪಲಿದ್ದು, ಬೆಳಗ್ಗೆ 11.30 ರಿಂದ 12.30ರವರೆಗೆ ಮಿಲಿಟರಿಯಿಂದ ಗೌರವ ಸಲ್ಲಿಕೆ ನಡೆಯಲಿದೆ.

ಬೆಂಗಳೂರು(ನ.30): ಜಮ್ಮು-ಕಾಶ್ಮೀರದ ನಗ್ರೋಟಾ ಉಗ್ರರದಾಳಿಯಲ್ಲಿ ನಿನ್ನೆ ಹುತಾತ್ಮರಾದ ಕನ್ನಡಿಗ ಮೇಜರ್ ಅಕ್ಷಯ್ ಗಿರೀಶ್ ಕುಮಾರ್ ಅವರ ಪಾರ್ಥಿವ ಶರೀರ ಇಂದು ಬೆಳಿಗ್ಗೆ 11 ಗಂಟೆಗೆ ಬೆಂಗಳೂರಿಗೆ ತಲುಪಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಯಲಹಂಕದಲ್ಲಿರುವ ಏರ್'ಫೋರ್ಸ್'ಗೆ ಪಾರ್ಥಿವ ಶರೀರ ತಲುಪಲಿದ್ದು, ಬೆಳಗ್ಗೆ 11.30 ರಿಂದ 12.30ರವರೆಗೆ ಮಿಲಿಟರಿಯಿಂದ ಗೌರವ ಸಲ್ಲಿಕೆ ನಡೆಯಲಿದೆ. ಮಧ್ಯಾಹ್ನ 12.30ರ ಬಳಿಕ ಪಾರ್ಥೀವ ಶರೀರ ಯಲಹಂಕದ ಗೇಟ್ ಗಾರ್ಡ್'ನ್ ತೆಗೆದುಕೊಂಡು ಹೋಗಲಾಗುತ್ತದೆ. ಮಧ್ಯಾಹ್ನ 2 ಗಂಟೆಯಿಂದ 4 ಗಂಟೆಯವರೆಗೂ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇಡಲಾಗುವುದು. ತದ ನಂತರ ಹೆಬ್ಬಾಳದ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.