ಬೆಂಗಳೂರು(ನ.16): ನಾಳೆ ರಾಜ್ಯದ ಗ್ರಾಹಕರಿಗೆ ತೊಂದರೆಯಾಗುವ ಸಾಧ್ಯತೆಯಿದೆ. ಕೇವಲ ಅಂಚೆ ಕಚೇರಿ ಹಾಗೂ ಎಟಿಎಂ'ಗಳಲ್ಲಿ ಹಣವಿದ್ದರೆ ಮಾತ್ರ ಗ್ರಾಹಕರಿಗೆ ನಿರಾಳವಾಗಬಹುದು. ನಾಳೆ ಕನಕ ಜಯಂತಿಯ ಪ್ರಯುಕ್ತ ರಾಜ್ಯ ಸರ್ಕಾರ ರಜೆ ಘೋಷಿಸಿದೆ.  ಕೇಂದ್ರ ಸರ್ಕಾರ ಹಳೆಯ 500 ಹಾಗೂ 1000 ನೋಟು ರದ್ದು ಪಡಿಸಿದ 8 ದಿನಗಳ ನಂತರ ರಾಜ್ಯ ಸರ್ಕಾರ ಕನಕ ಜಯಂತಿಯ ಪ್ರಯುಕ್ತ ಎಲ್ಲ ಬ್ಯಾಂಕುಗಳಿಗೆ ರಜೆ ಘೋಷಿಸಿದೆ. ಗ್ರಾಹಕರು ತಮ್ಮ ಹಣಕಾಸಿನ ವಹಿವಾಟನ್ನು ಅಂದರೆ ಬದಲಿ ನೋಟಿನ ವ್ಯವಸ್ಥೆಯನ್ನು ಅಂಚೆ ಕಚೇರಿ ಮೂಲಕ ವ್ಯವಹರಿಸಿಕೊಳ್ಳಬಹುದು.