. ಈ ದಿನದ ಅಂಗವಾಗಿ ಸಂವಿಧಾನದ ಪ್ರಸ್ತಾವವನ್ನು ಶಾಲಾ ಪ್ರಾರ್ಥನಾ ಸಮಯದಲ್ಲಿ ಜೋರಾಗಿ ಓದಬೇಕು, ಪ್ರಮುಖ ಲಕ್ಷಣಗಳ ಬಗ್ಗೆ ತಿಳಿಸುವುದು,

ಬೆಂಗಳೂರು(ನ.25): ರಾಜ್ಯದ ಎಲ್ಲ ಶಾಲೆಗಳಲ್ಲಿ ನ.26ರಂದು ‘ಸಂವಿಧಾನ ದಿನ’ವನ್ನಾಗಿ ಆಚರಣೆ ಮಾಡುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. ಈ ದಿನದ ಅಂಗವಾಗಿ ಸಂವಿಧಾನದ ಪ್ರಸ್ತಾವವನ್ನು ಶಾಲಾ ಪ್ರಾರ್ಥನಾ ಸಮಯದಲ್ಲಿ ಜೋರಾಗಿ ಓದಬೇಕು, ಪ್ರಮುಖ ಲಕ್ಷಣಗಳ ಬಗ್ಗೆ ತಿಳಿಸುವುದು, ಪ್ರಬಂಧ, ರಸಪ್ರಶ್ನೆ ಹಾಗೂ ‘ನನ್ನ ದೈನಂದಿನ ಜೀವನದಲ್ಲಿ ನನ್ನ ಸಂವಿಧಾನ’ ಎಂಬ ವಿಷಯ ಕುರಿತು ಚಿತ್ರಕಲಾ ಸ್ಪರ್ಧೆ ಏರ್ಪಡಿಸುವಂತೆ ಸೂಚನೆ ನೀಡಿದೆ. ಕಾರ್ಯಕ್ರಮ ನಡೆಸಿದ ಬಳಿಕ ಸುದ್ದಿ ಮತ್ತು ಛಾಯಾಚಿತ್ರಗಳನ್ನು ದಾಖಲೀಕರಿಸಿ ವರದಿ ನೀಡುವಂತೆ ತಿಳಿಸಿದೆ.