ಬೆಂಗಳೂರು(ಸೆ.09): ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯಕ್ಕೆ ಆಗಿರುವ ಅನ್ಯಾಯ ಖಂಡಿಸಿ ಸೆ.9 ರಂದು ಸುಮಾರು 1300 ಹೆಚ್ಚು ಸಂಘಟನೆಗಳು ಕರ್ನಾಟಕ ಬಂದ್’ಗೆ ಬೆಂಬಲ ಸೂಚಿಸಿವೆ.

ಪೆಟ್ರೋಲ್ ಬಂಕ್'ಗಳು ಬಾಗಿಲು ತೆರೆಯುವುದಿಲ್ಲ. ಬೆಳಿಗ್ಗೆ 6 ಗಂಟೆಯಿಂದಲೇ ಕೆಎಸ್'ಆರ್'ಟಿಸಿ ಬಸ್ ಸಂಚಾರ ಸ್ಥಗಿತಗೊಳ್ಳುವುದರೊಂದಿಗೆ, ಬ್ಯಾಂಕ್ ಸೇವೆಯೂ ಲಭ್ಯವಿರುವುದಿಲ್ಲ. ಆಸ್ಪತ್ರೆ, ಮೆಡಿಕಲ್ ಶಾಪ್, ಌಂಬ್ಯುಲೆನ್ಸ್ ಕಾರ್ಯ ನಿರ್ವಹಿಸಲಿವೆ, ಹಾಲು, ಪೇಪರ್, ತರಕಾರಿ, ಅಗತ್ಯವಸ್ತುಗಳು ಸಿಗಲಿದ್ದು, ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಬಂದ್'ಗೆ ಬೆಂಬಲ ನೀಡಿದ ಸಂಘಟನೆಗಳು
- ರೈತಪರ ಸಂಘಟನೆಗಳು
- ಬಿಬಿಎಂಪಿಯ 198 ಸದಸ್ಯರು ಬಾಹ್ಯ ಬೆಂಬಲ
- ಖಾಸಗಿ ಶಾಲಾ-ಕಾಲೇಜುಗಳ ಮಂಡಳಿಗಳು
- ಸರ್ಕಾರೀ ಶಾಲಾ-ಕಾಲೇಜುಗಳು ಬಂದ್
- ರಾಜ್ಯ ಒಕ್ಕಲಿಗರ ಸಂಘದಿಂದ ಬೆಂಬಲ
- ಹೊಟೇಲ್ ಮಾಲೀಕರ ಸಂಘದಿಂದ ಬಂಬಲ
- ಇಡೀ ಕನ್ನಡ ಚಿತ್ರೋದ್ಯಮ
- ವಿವಿಧ ಕಾರ್ಮಿಕ ಸಂಘಟನೆಗಳು
- ವಿವಿಧ ಕನ್ನಡ ಪರ ಸಂಘಟನೆ,
- ಲಾರಿ ಮಾಲೀಕರ ಸಂಘ,
- ಟ್ಯಾಕ್ಸಿ, ಕ್ಯಾಬ್ ಸಂಘಟನೆಗಳು,
- ಕನ್ನಡ ಸಾಹಿತ್ಯ ಪರಿಷತ್​,
- ಕಲಾವಿದರು ಸಂಘಟನೆ
- ಐಟಿ-ಬಿಟಿ ಕಂಪೆನಿಗಳು
- ಕೇಬಲ್ ಆಪರೇಟರ್ಸ್ ಅಸೋಸಿಯೇಷನ್
- ವರ್ತಕರ ಸಂಘಟನೆಗಳು
- ಬ್ಯಾಂಕ್​ ನೌಕರರ ಸಂಘಟನೆಗಳು

ಏನೇನು ಇರೋದಿಲ್ಲ :
-ಬಿಎಂಟಿಸಿ-ಕೆಎಸ್​ಆರ್​ಟಿಸಿ ಬಸ್ ಸೌಲಭ್ಯ ಸ್ಥಗಿತ
-ನಮ್ಮ ಮೆಟ್ರೋ ಸ್ಥಗಿತ
-ಆಟೋ, ಟ್ಯಾಕ್ಸಿ, ಕ್ಯಾಬ್ ಸ್ಥಗಿತ
-ಹೊಟೇಲ್'ಗಳು ಬಂದ್
-ಚಲನಚಿತ್ರ ಪ್ರದರ್ಶನ ಇರುವುದಿಲ್ಲ
-ಶಾಲಾ ಕಾಲೇಜುಗಳು ಬಂದ್
-ಮಾಲ್, ಮಾರುಕಟ್ಟೆ, ಸಂಪೂರ್ಣ ಬಂದ್
-ಪೆಟ್ರೋಲ್ ಬಂಕ್'ಗಳು ಕಾರ್ಯ ನಿರ್ವಹಿಸುವುದಿಲ್ಲ
-ಬ್ಯಾಂಕ್, ಅಂಚೆ ಕಚೇರಿ, ವಿಮೆ ಸೇವೆಗಳು ಸ್ಥಗಿತ
-ಕಾಮೆಡ್ ಕೆ ಕೌನ್ಸೆಲಿಂಗ್ ಇರುವುದಿಲ್ಲ

ಬಂದ್​ನಿಂದ ವಿನಾಯ್ತಿ :
-ರೈಲು ಸಂಚಾರ
-ಆಸ್ಪತ್ರೆಗಳು, ಆಂಬುಲೆನ್ಸ್
-ಮೆಡಿಕಲ್ ಷಾಪ್​ಗಳು ಕಾರ್ಯ ನಿರ್ವಹಿಸಲಿವೆ
-ಹಾಲು, ದಿನಪತ್ರಿಕೆಗಳು ಲಭ್ಯ

ಜನಸಾಮಾನ್ಯರು ಏನು ಮಾಡಬೇಕು
- ಇದು ನಮಗೆ, ನಮ್ಮ ರೈತರಿಗೆ ಆಗಿರುವ ಅನ್ಯಾಯ. ಶಾಂತಿಯುತವಾಗಿ ಖಂಡನೆ ವ್ಯಕ್ತಪಡಿಸೋಣ. ಅನ್ಯಾಯಕ್ಕೆ ಸಾತ್ವಿಕ ಪ್ರತಿಭಟನೆ ತೋರೋಣ. ಬೆಂಗಳೂರಿನ ಜನ ಆಚೆ ಬಂದು ತಮ್ಮ ಖಂಡನೆ ವ್ಯಕ್ತಪಡಿಸಬೇಕು.
- ಸಾರ್ವಜನಿಕರ ಆಸ್ತಪಾಸ್ತಿಗಳಿ ಹಾನಿ ಮಾಡಬೇಡಿ.
- ಇನ್ನು ಮಕ್ಕಳು, ವೃದ್ಧರು, ರೋಗಿಗಳು ಮನೆಯಿಂದ ಹೊರಗೆ ಬರಬೇಡಿ.
- ಪ್ರಯಾಣ ಮುಂದೂಡಿಕೊಳ್ಳುವುದು ಉತ್ತಮ.
- ಆಸ್ಪತ್ರೆಗಳಿಂದ ಡಿಸ್​ಚಾರ್ಜ್ ಆಗುವುದನ್ನು ಮುಂದೂಡಿಕೊಳ್ಳಿ.
- ಎಟಿಎಂನಲ್ಲಿ ಹಣ ತೆಗೆಯೋದು ಅಥವಾ ಬ್ಯಾಂಕ್ ವಹಿವಾಟು ಇಂದೇ ಮುಗಿಸಿಕೊಳ್ಳಿ