ವಾಹನ ಸವಾರರೇ ಗಮನಿಸಿ! ನಾಳೆ ಪೆಟ್ರೋಲ್ ಸಿಗೋದು ಕಷ್ಟ

First Published 27, Jan 2018, 1:06 PM IST
Tommorrow Truck Drivers Protes Petrol may not Availble
Highlights

ವಾಹನ ಸವಾರರೇ ಗಮನಿಸಿ ನಾಳೆ  ಪೆಟ್ರೋಲ್ ಸಿಗೋದು ಕಷ್ಟ. ಬೆಂಗಳೂರು ಸೇರಿ ಹಲವೆಡೆ ಪೆಟ್ರೋಲ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

ಬೆಂಗಳೂರು (ಜ.27): ವಾಹನ ಸವಾರರೇ ಗಮನಿಸಿ ನಾಳೆ  ಪೆಟ್ರೋಲ್ ಸಿಗೋದು ಕಷ್ಟ. ಬೆಂಗಳೂರು ಸೇರಿ ಹಲವೆಡೆ ಪೆಟ್ರೋಲ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

ಹೊಸಕೋಟೆ ಬಳಿ ರಸ್ತೆಯಲ್ಲಿ ಗುಂಡಿಗಳಿಗೆ ಬೇಸತ್ತಿರುವ ಲಾರಿ ಚಾಲಕರು ಸುಮಾರು 2 ಸಾವಿರ ಲಾರಿಗಳನ್ನು ನಿಲ್ಲಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.  ಹೊಸಕೋಟೆಯ ದೇವನಗುಂದಿಯಲ್ಲಿ ಚಾಲಕರು ಧರಣಿ ಪ್ರಾರಂಭಿಸಿದ್ದಾರೆ. ಎರಡು ಸಾವಿರಕ್ಕೂ ಹೆಚ್ಚು ಪೆಟ್ರೋಲ್ ಟ್ಯಾಂಕರ್ಸ್ ಸ್ಥಗಿತವಾಗಿದೆ.  ಬೆಂಗಳೂರು ನಗರ, ಕೋಲಾರ,  ತುಮಕೂರು, ಚಿಕ್ಕಬಳ್ಳಾಪುರಕ್ಕೆ ಪೆಟ್ರೋಲ್  ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆಯ ದೇವನಗುಂದಿಯಲ್ಲಿ  10 ಕಿಲೋ ಮೀಟರ್ ವ್ಯಾಪ್ತಿಯ ರಸ್ತೆಯಲ್ಲಿ ಹೆಜ್ಜೆ ಹೆಜ್ಜೆಗೂ ಗುಂಡಿಗಳಿವೆ. ಮಾಲೂರು ಕ್ರಾಸ್ -ದೇವನಗುಂದಿ IOC ಟರ್ಮಿನಲ್'ವರೆಗೂ ರಸ್ತೆ ಗುಂಡಿಗಳಿಂದಾಗಿ ತಿಂಗಳಿನಿಂದ ಪದೇ ಪದೇ ಲಾರಿ ಅಪಘಾತ ಸಂಭವಿಸುತ್ತಿದೆ.  ಬೇಸತ್ತ ವಾಹನ ಚಾಲಕರು ಈಗ ಲಾರಿಗಳನ್ನು ನಿಲ್ಲಿಸಿ ಪ್ರತಿಭಟನೆಗೆ ಮುಂದಾಗಿದ್ದಾರೆ.

loader