ರಾಜ್ಯದ ಜನರೇ ಎಚ್ಚರ! ನಾಳೆ ನಿಮ್ಮ ಆರೋಗ್ಯ ತಪ್ಪಿದ್ರೆ ಚಿಕಿತ್ಸೆ ಕೊಡೋಕೆ  ವೈದ್ಯರು ಇರಲ್ಲ. ಖಾಸಗಿ ವೈದ್ಯಕೀಯ (ತಿದ್ದುಪಡಿ) ಕಾಯ್ದೆಯನ್ನು ಖಂಡಿಸಿ ನಾಳೆ ರಾಜ್ಯಾದ್ಯಂತ ಮುಷ್ಕರ ನಡೆಸಲು ವೈದ್ಯರು ನಿರ್ಧರಿಸಿದ್ದಾರೆ.

ಬೆಂಗಳೂರು (ಜೂ.15): ರಾಜ್ಯದ ಜನರೇ ಎಚ್ಚರ! ನಾಳೆ ನಿಮ್ಮ ಆರೋಗ್ಯ ತಪ್ಪಿದ್ರೆ ಚಿಕಿತ್ಸೆ ಕೊಡೋಕೆ ವೈದ್ಯರು ಇರಲ್ಲ. ಖಾಸಗಿ ವೈದ್ಯಕೀಯ (ತಿದ್ದುಪಡಿ) ಕಾಯ್ದೆಯನ್ನು ಖಂಡಿಸಿ ನಾಳೆ ರಾಜ್ಯಾದ್ಯಂತ ಮುಷ್ಕರ ನಡೆಸಲು ವೈದ್ಯರು ನಿರ್ಧರಿಸಿದ್ದಾರೆ.

ನಾಳಿನ ಮುಷ್ಕರದಲ್ಲಿ 15 ಸಾವಿರಕ್ಕೂ ಹೆಚ್ಚು ವೈದ್ಯರು ಪಾಲ್ಗೊಳ್ಳುವ ಸಾಧ್ಯತೆಯಿದೆ. ಬೆಂಗಳೂರಿನ ಸಿಟಿ ರೈಲ್ವೇ ನಿಲ್ದಾಣದಿಂದ ಫ್ರೀಡಂ ಪಾರ್ಕ್’ವರೆಗೆ ಜಾಥಾ ನಡೆಸಲಿದ್ದಾರೆ. ನಾಳೆ ರಾಜ್ಯದ ಎಲ್ಲಾ ಆಸ್ಪತ್ರೆಗಳಲ್ಲಿ ಒಪಿಡಿ ಸ್ಥಗಿತಗೊಳಿಸಲು ತೀರ್ಮಾನಿಸಲಾಗಿದೆ. ರೋಗಿಗಳ ತುರ್ತು ಚಿಕಿತ್ಸೆಗೆ ಮಾತ್ರ ಪರ್ಯಾಯ ವ್ಯವಸ್ಥೆ ಇರುತ್ತದೆ. ನಾಳಿನ ಪ್ರತಿಭಟನೆಗೆ ಖಾಸಗಿ ಆಸ್ಪತ್ರೆ ವೈದ್ಯರಿಗೆ ಸರ್ಕಾರಿ ಆಸ್ಪತ್ರೆ ವೈದ್ಯರೂ ಬೆಂಬಲ ನೀಡಿದ್ದಾರೆ.

ಕಾಯ್ದೆ ಏನು ಹೇಳುತ್ತದೆ?

ಇನ್ನುಮುಂದೆ ರಾಜ್ಯದ ಎಲ್ಲ ಖಾಸಗಿ ಆಸ್ಪತ್ರೆಗಳ ಅಧಿಕಾರ ಸರ್ಕಾರದ ಹಿಡಿತಕ್ಕೆ ಸಾಧ್ಯತೆ

ರೋಗಿಗಳ ವೈದ್ಯಕೀಯ ಚಿಕಿತ್ಸೆಗೆ ಸರ್ಕಾರ ನಿಗದಿ ಮಾಡಿದ ಶುಲ್ಕ ತೆಗೆದುಕೊಳ್ಳಬೇಕು

ಆದೇಶ ಪಾಲಿಸದಿದ್ರೆ 25 ಸಾವಿರದಿಂದ 5 ಲಕ್ಷವರೆಗೆ ದಂಡ ಮತ್ತು ಆರು ತಿಂಗಳು ಜೈಲು

ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ) ವಿಧೇಯಕ-2017 ಮಂಡನೆ

ಎಲ್ಲ ಚಿಕಿತ್ಸೆಗಳಿಗೆ ಸರ್ಕಾರ ನಿಗದಿ ಮಾಡಿದ ದರಗಳನ್ನೇ ಆಸ್ಪತ್ರೆಗಳು ವಸೂಲಿ ಮಾಡಬೇಕು

ಸರ್ಕಾರ ನಿಗದಿ ಮಾಡಿದ ಶುಲ್ಕದ ಕುರಿತು ಖಾಸಗಿ ಆಸ್ಪತ್ರೆಗಳು ಫಲಕ ಅಳವಡಿಸಬೇಕು

ಆಸ್ಪತ್ರೆಯ ಪ್ರಮುಖ ಸ್ಥಳದಲ್ಲಿ ಅಥವಾ ಸ್ವಾಗತ ಕೋಣೆಯಲ್ಲಿ ಸೂಚನಾ ಫಲಕ ಅಳವಡಿಸಬೇಕು

ತಪಾಸಣೆ, ಹಾಸಿಗೆ ವೆಚ್ಚ, ಶಸ್ತ್ರಚಿಕಿತ್ಸೆ ಕೊಠಡಿ ವೆಚ್ಚ ಸರ್ಕಾರ ಹೇಳಿದಷ್ಟೇ ಶುಲ್ಕ ಪಡೆಯಬೇಕು

ತುರ್ತು ಪರಿಸ್ಥಿತಿ ವೇಳೆ ರೋಗಿಗಳಿಗೆ ಮುಂಗಡ ಹಣ ಕಟ್ಟುವಂತೆ ಒತ್ತಾಯಿಸುವಂತಿಲ್ಲ, ಚಿಕಿತ್ಸೆ ನಿರಾಕರಿಸುವಂತಿಲ್ಲ

ರೋಗಿಯ ಜೀವವನ್ನು ರಕ್ಷಿಸಲು ಅಗತ್ಯವಾದ ಕ್ರಮವನ್ನು ಆಸ್ಪತ್ರೆ ಕೈಗೊಳ್ಳಲೇಬೇಕು

ಆಸ್ಪತ್ರೆಯಲ್ಲಿ ರೋಗಿ ಮೃತಪಟ್ಟರೆ ಬಾಕಿ ಬಿಲ್‌ ಪಾವತಿ ಮಾಡುವಂತೆ ಒತ್ತಾಯಿವಂತಿಲ್ಲ

ಪ್ರತಿ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನೋಂದಣಿ ಪ್ರಾಧಿಕಾರ ರಚನೆಯಾಗಲಿದೆ

ಖಾಸಗಿ ಆಸ್ಪತ್ರೆಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ

ಲೈಸೆನ್ಸ್​​ ಇಲ್ಲದೇ ಆಸ್ಪತ್ರೆ ನಡೆಸಿದಲ್ಲಿ ಇನ್ನು ಮುಂದೆ 10 ಸಾವಿರ ಬದಲಾಗಿ 5 ಲಕ್ಷ ದಂಡ

ಲೈಸೆನ್ಸ್​ ಷರತ್ತು ಉಲ್ಲಂಘಿಸಿ ಆಸ್ಪತ್ರೆ ನಡೆಸುವ ವ್ಯಕ್ತಿಗೆ ಮೂರು ವರ್ಷ ಜೈಲು ಶಿಕ್ಷೆ ಸಾಧ್ಯತೆ

ವೈದ್ಯರ ಪ್ರತಿಭಟನೆ ಯಾಕೆ?

ಸರ್ಕಾರ ನಿರ್ಧರಿಸುವ ದರದಲ್ಲಿ ವೈದ್ಯಕೀಯ ವೆಚ್ಚ ತೆಗೆದುಕೊಳ್ಳಲು ವಿರೋಧ

ವೈದ್ಯರ ತಪ್ಪುಗಳಿಗೆ ದೂರು ಸಲ್ಲಿಸಲು ಜಿಲ್ಲಾ ಮಟ್ಟದಲ್ಲಿ ಪ್ರತ್ಯೇಕ ಕೌಂಟರ್

ಪ್ರತ್ಯೇಕ ಕೌಂಟರ್ ತೆರೆಯುವುದಕ್ಕೆ ಖಾಸಗಿ ವೈದ್ಯರ ವಿರೋಧ

ಖಾಸಗಿ ವೈದ್ಯರು ಹಾಗೂ ಸರ್ಕಾರಿ ವೈದ್ಯರಿಂದಲೂ ಕೌಂಟರ್​​ಗೆ ವಿರೋಧ

ನಾಳಿನ ಪ್ರತಿಭಟನೆಯಲ್ಲಿ 15 ಸಾವಿರಕ್ಕೂ ಹೆಚ್ಚು ವೈದ್ಯರು ಭಾಗವಹಿಲಿದ್ದಾರೆ

ನಾಳೆ ಬೆಂಗಳೂರಿನ ರೈಲ್ವೆ ನಿಲ್ದಾಣದಿಂದ ಫ್ರೀಡಂ ಪಾರ್ಕ್ ವರೆಗೆ ಪ್ರತಿಭಟನಾ ಜಾಥಾ

ನಾಳೆ ತುರ್ತು ಸೇವೆ ಹೊರತುಪಡಿಸಿ ಎಲ್ಲ ಆಸ್ಪತ್ರೆಗಳಲ್ಲಿ ಒಪಿಡಿ ಸೇವೆ ಸ್ಥಗಿತಗೊಳ್ಳುವ ಸಾಧ್ಯತೆ

ಖಾಸಗಿ ವೈದ್ಯಕೀಯ ತಿದ್ದುಪಡಿ ಕರ್ನಾಟಕ ಕ್ಲಿನಿಕ್ ಎಸ್ಟಾಬ್ಲಿಷ್ಮೆಂಟ್ ಕಾಯ್ದೆ ತರಲು ಒತ್ತಾಯ