ನಾಳೆ ಕರ್ನಾಟಕ ಬಂದ್'ಗೆ ಕರೆ; ಏನೇನ್ ಇರತ್ತೆ? ಏನೇನ್ ಇರಲ್ಲ? ಹೇಗಿದೆ ಬಂದ್'ಗೆ ಪ್ರತಿಕ್ರಿಯೆ?

First Published 24, Jan 2018, 10:24 AM IST
Tommorrow Karnataka Band
Highlights

ಕಳಸಾ-ಬಂಡೂರಿ ಯೋಜನೆಗಾಗಿ ನಾಳೆ ಬಂದ್'ಗೆ ಕರೆ ನೀಡಲಾಗಿದೆ. ಕರ್ನಾಟಕ ಬಂದ್​​​'ಗೆ ಕನ್ನಡ ಪರ ಸಂಘಟನೆಗಳಲ್ಲಿಯೇ ಒಡಕು ಉಂಟಾಗಿದೆ.  ಕೆಲ ಸಂಘಟನೆಗಳಿಂದ ಬಂದ್'ಗೆ ಬೆಂಬಲ ವ್ಯಕ್ತವಾದರೆ,  ಕೆಲ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ.  ಕೆಲ ಸಂಘಟನೆಗಳು ಬೆಂಬಲ ಸೂಚಿಸಬೇಕಾ? ಬೇಡವಾ? ಅನ್ನೋ ಗೊಂದಲದಲ್ಲಿವೆ.

ಬೆಂಗಳೂರು (ಜ.24): ಕಳಸಾ-ಬಂಡೂರಿ ಯೋಜನೆಗಾಗಿ ನಾಳೆ ಬಂದ್'ಗೆ ಕರೆ ನೀಡಲಾಗಿದೆ. ಕರ್ನಾಟಕ ಬಂದ್​​​'ಗೆ ಕನ್ನಡ ಪರ ಸಂಘಟನೆಗಳಲ್ಲಿಯೇ ಒಡಕು ಉಂಟಾಗಿದೆ.  ಕೆಲ ಸಂಘಟನೆಗಳಿಂದ ಬಂದ್'ಗೆ ಬೆಂಬಲ ವ್ಯಕ್ತವಾದರೆ,  ಕೆಲ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ.  ಕೆಲ ಸಂಘಟನೆಗಳು ಬೆಂಬಲ ಸೂಚಿಸಬೇಕಾ? ಬೇಡವಾ? ಅನ್ನೋ ಗೊಂದಲದಲ್ಲಿವೆ.

ಏನೇನು ಇರುತ್ತೆ?

ತುರ್ತು ಚಿಕಿತ್ಸೆ, ಮೆಡಿಕಲ್ ಸ್ಟೋರ್, ಅಗತ್ಯ ವಸ್ತುಗಳಾದ ಪೇಪರ್, ಹಾಲು, ತರಕಾರಿ,ಸಾರಿಗೆ ಸೇವೆ, ಮೆಟ್ರೋ ಸಾಮಾನ್ಯವಾಗಿ ಬಂದ್ ಸಮಯದಲ್ಲಿ ಅಗತ್ಯ ವಸ್ತುಗಳಿಗೆ ಯಾವುದೇ ಅಡಚಣೆ ಇರುವುದಿಲ್ಲ. ಹೀಗಾಗಿ ತುರ್ತು ಚಿಕಿತ್ಸೆ, ಆರೋಗ್ಯ ಸೇವೆ , ಮೆಡಿಕಲ್ ಸ್ಟೋರ್, ಪೇಪರ್ , ಹಾಲು, ತರಕಾರಿ ಪೂರೈಕೆಯಲ್ಲಿ ಯಾವುದೇ ವ್ಯತ್ಯಯ ಉಂಟಾಗುವುದಿಲ್ಲ. ಇನ್ನೂ ಸಾರಿಗೆ ಸೇವೆ ಯಾಥಾ ಪ್ರಕಾರ ಇರಲಿದೆ.

ಏನೇನು ಇರಲ್ಲ?

ಖಾಸಗಿ ಶಾಲಾ, ಕಾಲೇಜ್, ಅಂಗಡಿ ಮುಂಗಟ್ಟು, ಎಪಿಎಂಸಿ ಮಾರುಕಟ್ಟೆಗಳು, ಚಲನಚಿತ್ರ ಮಂದಿರಗಳು ಬಂದ್'ಗೆ ಖಾಸಗಿ ಶಾಲಾ ಕಾಲೇಜುಗಳ ಒಕ್ಕೂಟ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿವೆ. ಇನ್ನು ಸರ್ಕಾರಿ ಶಾಲೆ, ಕಾಲೇಜ್'ಗಳು ಬಂದ್'ಗೆ ಬೆಂಬಲ ಸೂಚಿಸಿಲ್ಲ. ಪರಿಸ್ಥಿತಿ ನೋಡಿಕೊಂಡು ರಜೆ ನೀಡುವ ಸಾಧ್ಯತೆ ಇದೆ. ಸಮಗ್ರ ನೀರಾವರಿಗಾಗಿ ಬಂದ್ ಕರೆ ನೀಡಿರುವ ಹಿನ್ನೆಲೆಯಲ್ಲಿ ಎಪಿಎಂಸಿ ಮಾರುಕಟ್ಟೆ ಸ್ಥಬ್ತವಾಗಲಿದೆ. ಇದಲ್ಲದೆ ಈಗಾಗಲೇ ಚಲಚಿತ್ರ ವಾಣಿಜ್ಯ ಮಂಡಳಿ ಬಂದ್'ಗೆ ಬೆಂಬಲ ಸೂಚಿಸಿರುವುದರಿಂದ 25 ರಂದು ಕನ್ನಡ ಚಲಚಿತ್ರ ಪ್ರದರ್ಶನ ಸ್ಥಗಿತಗೊಳ್ಳಲಿದೆ. ಸಮಗ್ರ ನೀರಾವರಿಗಾಗಿ ಹೋರಾಟ ನಡೆಯುತ್ತಿರುವುದರಿಂದ ರೈತ ಸಂಘಟನೆಗಳು ಸಂಪೂರ್ಣ ಬೆಂಬಲ ನೀಡಲಿವೆ.

ಯಾರ ಬೆಂಬಲ?

ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ), ಕನ್ನಡ ಚಳವಳಿ ವಾಟಳ್ ಪಕ್ಷ

ಹಸಿರು ಸೇನೆ ರೈತ ಸಂಘಟನೆ, ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘ

ವಕೀಲರ ಸಂಘ, ಲಾರಿ ಮಾಲೀಕರ ಸಂಘ, ಬಿಬಿಎಂಪಿ ಕಾರ್ಮಿಕ ಸಂಘ

ಸಾಹಿತ್ಯ ಪರಿಷತ್, ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ, ಕನ್ನಡ ಕ್ರಿಯಾ ಸಮಿತಿ

ಹೋಟೆಲ್ ಮಾಲೀಕ ಸಂಘ, ಎಪಿಎಂಪಿ ಯಾರ್ಡ್ ಮತ್ತು ಆರ್ ಎಂಸಿ ಯಾರ್ಡ್

ಹಮಾಲಿಗಳ ಸಂಘ, ಚಿಕ್ಕಬಳ್ಳಾಪುರ ಶಾಶ್ವತ ನೀರಾವರಿ ಹೋರಾಟಗಾರು

ರಾಜಕುಮಾರ್ ಅಭಿಮಾನಿಗಳ ಸಂಘದಿಂದ ನಾಳಿನ ಕರ್ನಾಟಕ ಬಂದ್​ಗೆ ಬೆಂಬಲ

ಯಾರ ಬೆಂಬಲವಿಲ್ಲ?

ಕರ್ನಾಟಕ ಸಂಘಟನೆಗಳ ಒಕ್ಕೂಟ, ಅಖಿಲ ಕನ್ನಡ ಚಳವಳಿ ಸಮಿತಿ

ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣ ಗೌಡ ಬಣ), ಕರ್ನಾಟಕ ಕಾರ್ಮಿಕ ವೇದಿಕೆ

ಹಸಿರು ಕರ್ನಾಟಕ ರೈತ ಸೇನೆ, ಅಖಂಡ ಕಾರ್ಮಿಕರ ಸಂಘ, ಅಂಬೇಡ್ಕರ್ ಸೇನೆ

ಬಂದ್​ ರಜೆ!

ಐಟಿ -ಬಿಟಿ, ಸರ್ಕಾರಿ, ಖಾಸಗಿ ಉದ್ಯೋಗಿಗಳಿಗೆ ಈ ವಾರ ನಾಲ್ಕು ದಿನ ರಜೆ ಸಿಗಲಿದೆ.  ನಾಳೆ ಕರ್ನಾಟಕ ಬಂದ್‌ ಇರುವ ಹಿನ್ನೆಲೆಯಲ್ಲಿ ಹಲವು ಶಾಲಾ-ಕಾಲೇಜು ಇರಲ್ಲ.  ಜನವರಿ 26 ರಂದು ಗಣರಾಜೋತ್ಸವಕ್ಕೂ  ಒಂದು ದಿನ ರಜೆ ಸಿಗಲಿದೆ.  ಶನಿವಾರ ಸರ್ಕಾರಿ ನೌಕರರು ರಜೆ ಹಾಕೊಂಡರೆ ಭರ್ತಿ ನಾಲ್ಕು ದಿನಗಳ ರಜೆ ಸಿಗಲಿದೆ.

loader