ಬೆಂಗಳೂರು (ಸೆ.24): ಎಸ್.ಎಂ.ಕೃಷ್ಣ ಅಳಿಯ ಸಿದ್ದಾರ್ಥ್ ಮನೆ, ಕಂಪನಿ ಮೇಲೆ ಐಟಿ ದಾಳಿ ಮುಕ್ತಾಯಗೊಂಡಿದೆ. ನಾಲ್ಕು ದಿನ ದಾಖಲೆ ಪರಿಶೀಲನೆ ನಡೆಸಿದ ಅಧಿಕಾರಿಗಳಿಗೆ ದಾಳಿ ವೇಳೆ ಅಪಾರ ಪ್ರಮಾಣದ ಆಸ್ತಿ ದಾಖಲೆಗಳು ಪತ್ತೆಯಾಗಿವೆ.

650 ಕೋಟಿ ಆದಾಯ ಘೋಷಿಸಿಕೊಂಡಿದ್ದ ಸಿದ್ದಾರ್ಥ್​ ಆದಾಯಕ್ಕೂ ಮೀರಿ ಅಧಿಕ ಪ್ರಮಾಣದ ಆಸ್ತಿ ಗಳಿಸಿರುವ ಬಗ್ಗೆ ಐಟಿ ಅಧಿಕಾರಿಗಳಿಗೆ ಮಾಹಿತಿ ಲಭ್ಯವಾಗಿದೆ. ಘೋಷಿತ ಆದಾಯ, ಅಘೋಷಿತ ಆದಾಯಕ್ಕೆ ಅಜಗಜಾಂತರ ವ್ಯತ್ಯಾಸ ಕಂಡುಬಂದಿದ್ದು ತೆರಿಗೆ ವಂಚನೆ ನಡೆದಿರುವುದು ದಾಖಲೆ ಪರಿಶೀಲನೆ ವೇಳೆ ಪತ್ತೆಯಾಗಿದೆ.

ನಿಯಮಗಳನ್ನ ಗಾಳಿಗೆ ತೂರಿ ಹಣ ವರ್ಗಾವಣೆ ಮಾಡಿರುವ ಸಿದ್ದಾರ್ಥ್​ ಒಡೆತನದ ಕಂಪನಿಗಳನ್ನು ಅಕ್ರಮ ಆಸ್ತಿ ಗಳಿಕೆ ಆರೋಪದಡಿ ಅಧಿಕಾರಿಗಳು ವಿಚಾರಣೆಗೊಳಪಡಿಸಿದ್ದಾರೆ. ನಾಳೆ ಐಟಿ ಅಧಿಕಾರಿಗಳಿಂದ ಸಮನ್ಸ್​ ಜಾರಿಯಾಗುವ ಸಾಧ್ಯತೆ ಇದೆ.  ನಾಳೆ ಇಡಿ ಅಧಿಕಾರಿಗಳಿಂದ ತನಿಖೆ ನಡೆಸುವ ಸಾಧ್ಯತೆ ಇದೆ.