ಬಾಬರಿ ಮಸೀದಿ ಧ್ವಂಸಕ್ಕೆ ನಾಳೆ 25 ವರ್ಷವಾಗುವ ಹಿನ್ನಲೆಯಲ್ಲಿ ನಾಳೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರ್ಬಂಧಕಾಜ್ಞೆ ಜಾರಿಗೊಳಿಸಿ ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತ ಜಂಟಿ ಆದೇಶ ಹೊರಡಿಸಿದೆ.
ಮಂಗಳೂರು (ಡಿ.05): ಬಾಬರಿ ಮಸೀದಿ ಧ್ವಂಸಕ್ಕೆ ನಾಳೆ 25 ವರ್ಷವಾಗುವ ಹಿನ್ನಲೆಯಲ್ಲಿ ನಾಳೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರ್ಬಂಧಕಾಜ್ಞೆ ಜಾರಿಗೊಳಿಸಿ ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತ ಜಂಟಿ ಆದೇಶ ಹೊರಡಿಸಿದೆ.
ನಾಳೆ ಬೆಳಗ್ಗೆ 6 ಗಂಟೆಯಿಂದ ರಾತ್ರಿ 12 ಗಂಟೆವರೆಗೆ ನಿರ್ಬಂಧಕಾಜ್ಞೆ ಜಾರಿಯಿರಲಿದೆ. ಕಾನೂನು ಸುವ್ಯವಸ್ಥೆ ಕಾಪಾಡುವ ಹಿನ್ನಲೆಯಲ್ಲಿ ನಿರ್ಬಂಧಕಾಜ್ಞೆ ಹೇರಿದ್ದು ನಾಳೆ ಬಹಿರಂಗ ಸಭೆ, ಪ್ರತಿಭಟನೆ, ರ್ಯಾಲಿಗೆ ನಿಷೇಧ ಹೇರಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ಮಂಗಳೂರು ನಗರ ಪೊಲೀಸ್ ಕಮೀಷನರ್ ಟಿ ಆರ್ ಸುರೇಶ್ ಹೇಳಿದ್ದಾರೆ.
