ಟೊಮೆಟೊ ಉತ್ಫಾದನೆ ಕುಂಠಿತವಾಗಲು ಪ್ರಮುಖ ಕಾರಣ ಮಳೆಯ ಅಭಾವ, ಹಿಮಾಚಲ ಪ್ರದೇಶ ಹಾಗೂ ಬೆಂಗಳೂರಿನಲ್ಲಿ ಬೆಳೆ ಕೈಕೊಟ್ಟಿರುವುದರಿಂದ ಟಮೊಟೊ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದೆ.
ನವದೆಹಲಿ(ಜು.25): ಕಳೆದೊಂದು ತಿಂಗಳನಿಂದ ದೇಶಾದ್ಯಂತ ಗ್ರಾಹಕರಿಗೆ ಕಣ್ಣೀರು ತರಿಸುತ್ತಿರುವ ಟೊಮೆಟೊ ಬೆಲೆ ಮತ್ತಷ್ಟು ಏರಿಕೆಯಾಗಿದೆ.
ದೆಹಲಿಯಲ್ಲಿ ಪ್ರತಿ ಕೆಜಿ ಟೊಮೆಟೊ ಬೆಲೆ 100 ರುಪಾಯಿ ತಲುಪಿದೆ. ಮದರ್ ಡೇರಿ ತನ್ನ ಸಫಲ್ ಅಂಗಡಿಗಳಲ್ಲಿ ಕೆಜಿಗೆ 96 ರುಪಾಯಿಯಂತೆ ಮಾರಾಟ ಮಾಡುತ್ತಿದ್ದರೆ, ಆನ್'ಲೈನ್'ನಲ್ಲಿ ದೈನಂದಿನ ಬಳಕೆ ವಸ್ತುಗಳನ್ನು ಮಾರಾಟ ಮಾಡುವ ತಾಣಗಳು ಮತ್ತು ಚಿಲ್ಲರೆ ಅಂಗಡಿಯಲ್ಲಿ ಟೊಮೆಟೊ ಬೆಲೆ ಕೆಜಿಗೆ 100 ರುಪಾಯಿ ತಲುಪಿದೆ.
ಬೇಡಿಕೆ ಎಂದಿನಂತೇ ಇದ್ದು, ಪೂರೈಕೆ ಕಡಿಮೆಯಾಗಿರುವುದೇ ಬೆಲೆ ಏರಿಕೆಗೆ ಕಾರಣ ಎನ್ನಲಾಗಿದೆ. ಅಲ್ಲದೇ ಟೊಮೆಟೊ ಉತ್ಫಾದನೆ ಕುಂಠಿತವಾಗಲು ಪ್ರಮುಖ ಕಾರಣ ಮಳೆಯ ಅಭಾವ, ಹಿಮಾಚಲ ಪ್ರದೇಶ ಹಾಗೂ ಬೆಂಗಳೂರಿನಲ್ಲಿ ಬೆಳೆ ಕೈಕೊಟ್ಟಿರುವುದರಿಂದ ಟಮೊಟೊ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದೆ.
ದೇಶಾದ್ಯಂತ ಸರಾಸರಿ ಟೊಮೆಟೊ ಬೆಲೆ 80 ರುಪಾಯಿ ಇದೆ.
