Asianet Suvarna News Asianet Suvarna News

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್‌ ಬೂತ್‌ ರದ್ದು?

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್‌ ಬೂತ್‌ ರದ್ದತಿಗೆ ಕೇಂದ್ರ ಚಿಂತನೆ| ಟೋಲ್‌ ಸಂಗ್ರಹಕ್ಕೆ ವಾಹನಗಳಿಗೆ ಉಪಕರಣ| ರಸ್ತೆ ಬಳಸಿದರೆ ಖಾತೆಯಿಂದ ನೇರ ಹಣ ಕಡಿತ| ದೆಹಲಿ- ಮುಂಬೈ ಹೆದ್ದಾರಿಯಲ್ಲಿ ಪ್ರಯೋಗ

Toll Booth of National highway may get closed
Author
New Delhi, First Published Jan 24, 2019, 8:30 AM IST | Last Updated Jan 24, 2019, 8:30 AM IST

ನವದೆಹಲಿ[ಜ.24]: ಟೋಲ್‌ ಬೂತ್‌ಗಳಲ್ಲಿ ಸರತಿ ಸಾಲಿನಲ್ಲಿ ನಿಂತು, ನಿಮಿಷಗಟ್ಟಲೆ ಕಾಯಬೇಕು ಎಂಬುದು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರಯಾಣಿಸುವ ವಾಹನ ಸವಾರರ ಹಳೆಯ ದೂರು. ಇದನ್ನು ಈಗ ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ, ದೇಶಾದ್ಯಂತ ರಾಷ್ಟ್ರೀಯ ಹೆದ್ದಾರಿಗಳಲ್ಲಿರುವ ಎಲ್ಲ ಟೋಲ್‌ ಬೂತ್‌ಗಳನ್ನೇ ರದ್ದುಗೊಳಿಸಲು ಮುಂದಾಗಿದೆ. ಟೋಲ್‌ ಸಂಗ್ರಹಕ್ಕಾಗಿ ವಾಹನಗಳಲ್ಲೇ ಅಳವಡಿಸಬಹುದಾದ ಉಪಕರಣವೊಂದನ್ನು ಪರಿಚಯಿಸಲು ಉದ್ದೇಶಿಸಿದೆ.

ವಾಹನಗಳ ಮ್ಯೂಸಿಕ್‌ ಸಿಸ್ಟಂ ಬಳಿ ಈ ಉಪಕರಣ ಇರುತ್ತದೆ. ಅದು ವಾಹನ ಮಾಲೀಕರ ಬ್ಯಾಂಕ್‌ ಖಾತೆಗೆ ಲಿಂಕ್‌ ಆಗಿರುತ್ತದೆ. ವಾಹನ ಸವಾರ ಒಂದು ನಿರ್ದಿಷ್ಟರಾಷ್ಟ್ರೀಯ ಹೆದ್ದಾರಿ ಬಳಸಿದರೆ, ಅದಕ್ಕೆ ತಗುಲುವ ಶುಲ್ಕ ನೇರವಾಗಿ ಆತ/ಆಕೆಯ ಬ್ಯಾಂಕ್‌ ಖಾತೆಯಿಂದ ಕಡಿತಗೊಳ್ಳುತ್ತದೆ ಎಂದು ಹಿಂದಿ ದೈನಿಕವೊಂದು ವರದಿ ಮಾಡಿದೆ.

ಈಗಾಗಲೇ ದೆಹಲಿ- ಮುಂಬೈ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಉಪಕರಣದ ಪ್ರಯೋಗ ನಡೆಯುತ್ತಿದೆ. ಅದು ಯಶಸ್ವಿಯಾದರೆ, ದೇಶಾದ್ಯಂತ ವಿಸ್ತರಿಸಿ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಅವರು ಅಧಿಸೂಚನೆ ಹೊರಡಿಸಲಿದ್ದಾರೆ ಎಂದು ವರದಿ ಹೇಳಿದೆ.

ಟೋಲ್‌ಗಳಲ್ಲಿ ವಾಹನಗಳ ಸುಗಮ ಸಂಚಾರಕ್ಕಾಗಿ ಫಾಸ್ಟ್‌ಟ್ಯಾಗ್‌ಗಳನ್ನು ಕೇಂದ್ರ ಸರ್ಕಾರ ಪರಿಚಯಿಸಿದೆ. ಅದು ಜನಪ್ರಿಯವೂ ಆಗಿದೆ. ಅಲ್ಲದೆ ಟೋಲ್‌ ಸಂಗ್ರಹ ಕೂಡ ಹೆಚ್ಚಾಗಿದೆ.

Latest Videos
Follow Us:
Download App:
  • android
  • ios