ಸರ್ಕಾರ ಜನಸಂಖ್ಯಾ ನಿಯಂತ್ರಣ ಕಾನೂನು ರೂಪಿಸುವವರೆಗೂ ಮಕ್ಕಳನ್ನು ಹೆರುತ್ತಲೇ ಇರಿ ಎಂದು ಸಾರ್ವಜನಿಕರಿಗೆ ಹಾಗೂ ತಮ್ಮದೇ ಪತ್ನಿಗೆ ಕರೆ ನೀಡುವ ಮೂಲಕ ಖತೌಲಿಯ ಬಿಜೆಪಿ ಶಾಸಕ ವಿಕ್ರಮ್‌ ಸೈನಿ ಹೊಸದೊಂದು ವಿವಾದ ಸೃಷ್ಟಿಸಿದ್ದಾರೆ.

ಮುಜಫ್ಫರ್‌ನಗರ: ಸರ್ಕಾರ ಜನಸಂಖ್ಯಾ ನಿಯಂತ್ರಣ ಕಾನೂನು ರೂಪಿಸುವವರೆಗೂ ಮಕ್ಕಳನ್ನು ಹೆರುತ್ತಲೇ ಇರಿ ಎಂದು ಸಾರ್ವಜನಿಕರಿಗೆ ಹಾಗೂ ತಮ್ಮದೇ ಪತ್ನಿಗೆ ಕರೆ ನೀಡುವ ಮೂಲಕ ಖತೌಲಿಯ ಬಿಜೆಪಿ ಶಾಸಕ ವಿಕ್ರಮ್‌ ಸೈನಿ ಹೊಸದೊಂದು ವಿವಾದ ಸೃಷ್ಟಿಸಿದ್ದಾರೆ.

ಉತ್ತರಪ್ರದೇಶದ ಮುಜಫ್ಫರ್‌ನಗರದಲ್ಲಿ ಜನಸಂಖ್ಯಾ ನಿಯಂತ್ರಣ ಆಂದೋಲನವೊಂದನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು, ‘ನಮಗಿಬ್ಬರೇ ಮಕ್ಕಳು ಸಾಕು ಎನ್ನುತ್ತಾಳೆ ನನ್ನ ಪತ್ನಿ. ಆದರೆ ಜನಸಂಖ್ಯಾ ನಿಯಂತ್ರಣ ಕಾನೂನು ಅಸ್ತಿತ್ವಕ್ಕೆ ಬರುವವರೆಗೂ ಮಕ್ಕಳನ್ನು ಹಡೆಯುತ್ತಾ ಇರು ಎಂದು ಹೇಳಿದ್ದೇನೆ’ ಎಂದು ಹೇಳಿದರು.

ಇದೇ ವೇಳೆ ಎರಡು ಮಕ್ಕಳನ್ನು ಹೊಂದುವ ಕಾನೂನು ಕೇವಲ ಹಿಂದುಗಳಿಗೆ ಮಾತ್ರ ಸೀಮಿತವಾಗಿದೆ ಎಂದು ಟೀಕಿಸಿದರು. ಸೈನಿ ವಿವಾದಾತ್ಮಕ ಹೇಳಿಕೆ ನೀಡುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಹಿಂದುಸ್ತಾನ ಇರುವುದು ಹಿಂದುಗಳಿಗಾಗಿ. ಮುಸ್ಲಿಮರು ಪಾಕಿಸ್ತಾನಕ್ಕೆ ತೆರಳಿ ಎಂದಿದ್ದರು.