ಬಸ್’ನಲ್ಲಿ ಶೌಚಾಲಯ ವ್ಯವಸ್ಥೆ

First Published 7, Apr 2018, 12:04 PM IST
Toilet In Bus
Highlights

ಪ್ರಧಾನ ಮಂತ್ರಿಗಳ ಸ್ವಚ್ಛತಾ ಭಾರತ್ ಅಭಿಯಾನದಿಂದ ಪ್ರೇರಣೆಗೊಂಡಿರುವ ರಾಜ್ಯ ಪೊಲೀಸ್ ಇಲಾಖೆಯು ಈಗ ಶುಚಿತ್ವ ಕಾಪಾಡುವ ಸಲುವಾಗಿ ಸಶಸ್ತ್ರ ಮೀಸಲು ಪಡೆ(ಕೆಎಸ್‌ಆರ್‌ಪಿ) ವಾಹನಗಳಿಗೆ ಶೌಚಾಲಯ ವ್ಯವಸ್ಥೆ ಕಲ್ಪಿಸಿದೆ.

ಬೆಂಗಳೂರು : ಪ್ರಧಾನ ಮಂತ್ರಿಗಳ ಸ್ವಚ್ಛತಾ ಭಾರತ್ ಅಭಿಯಾನದಿಂದ ಪ್ರೇರಣೆಗೊಂಡಿರುವ ರಾಜ್ಯ ಪೊಲೀಸ್ ಇಲಾಖೆಯು ಈಗ ಶುಚಿತ್ವ ಕಾಪಾಡುವ ಸಲುವಾಗಿ ಸಶಸ್ತ್ರ ಮೀಸಲು ಪಡೆ(ಕೆಎಸ್‌ಆರ್‌ಪಿ) ವಾಹನಗಳಿಗೆ ಶೌಚಾಲಯ ವ್ಯವಸ್ಥೆ ಕಲ್ಪಿಸಿದೆ.

ಕೆಎಸ್‌ಆರ್‌ಪಿ ಎಡಿಜಿಪಿ ಭಾಸ್ಕರ್ ರಾವ್ ಅವರೇ ಈ ಯೋಜನೆಯ ರೂವಾರಿಯಾಗಿದ್ದು, ಸ್ವಚ್ಛತೆಗೆ ಆದ್ಯತೆ ನೀಡಿದ ವಾಹನಗಳಿಗೆ ಟಾಯ್ಲೆಟ್ ಅನ್ನು ಆಳವಡಿಸಿದ್ದಾರೆ. ಇದಕ್ಕಾಗಿ ಪ್ರತಿ ವಾಹನಕ್ಕೆ 2 ಲಕ್ಷ ವೆಚ್ಚವಾಗಿದ್ದು, ಕೆಎಸ್‌ಆರ್‌ಪಿ ತುಕಡಿಯ ವಾಹನಗಳಿಗೆ ವಿಶೇಷ ವಿನ್ಯಾಸಗೊಳಿಸಿ ಹಿಂಭಾಗದಲ್ಲಿ ಶೌಚಾಲಯ ಕಲ್ಪಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಚುನಾವಣೆ, ಗಣ್ಯರ ಭೇಟಿ, ಗಲಾಟೆ, ದೊಂಬಿ ಹೀಗೆ ಭದ್ರತಾ ಕೆಲಸಗಳಿಗೆ ನಿಯೋಜಿತರಾಗುವ ಕೆಎಸ್‌ಆರ್‌ಪಿ ಸಿಬ್ಬಂದಿ, ಕರ್ತವ್ಯ ನಿರ್ವಹಣೆ  ಸ್ಥಳದಲ್ಲಿ ಶೌಚಾಲಯದ ಇಲ್ಲದೆ ತೊಂದರೆ ಎದುರಿಸುತ್ತಿದ್ದರು. ಈ ಶೌಚಾಲಯ ಸಮಸ್ಯೆಯನ್ನು ಗಂಭೀರವಾಗಿ ತೆಗೆದುಕೊಂಡ ಎಡಿಜಿಪಿ ಭಾಸ್ಕರ್ ರಾವ್ ಅವರು ಅಂತಿಮವಾಗಿ ಪರಿಹಾರ ಒದಗಿಸಿದ್ದಾರೆ.

loader