ನಗರದ ಲಾಲ್ ದರ್ವಾಜ ಬಳಿ ಚೇತನ್ ನಂಜಿ ಎಂಬ ಪಾನಿಪೂರಿ ವ್ಯಾಪಾರಿ ತನ್ನ ಚಾಟ್ಸ್ ಐಟಂಗಳಲ್ಲಿ ಟಾಯ್ಲೆಟ್ ಕ್ಲೀನರ್ ಬಳಸುತ್ತಿದ್ದ.

ಅಹಮದಾಬಾದ್(ಫೆ.6): ಪಾನಿಪೂರಿ ಪ್ರಿಯರೆ ಎಚ್ಚರ! ನೀವು ತಿನ್ನುವ ಏನೇನು ಮಿಕ್ಸ್ ಮಾಡಿರಲಾಗಿರುತ್ತದೆ ಗೊತ್ತೆ? ಆರೋಗ್ಯಕ್ಕೆ ಗಂಭೀರ ಹಾನಿಯುಂಟು ಮಾಡುವ ಮಿಕ್ಸ್ ಮಾಡಿದ ಪರಿಣಾಮ ಕೋರ್ಟ್ ಸರಿಯಾದ ದಂಡನೆ ನೀಡಿದೆ. ಈ ಘಟನೆ ನಡೆದಿರುವುದು ಅಹಮದಾಬಾದ್'ನಲ್ಲಿ.

ನಗರದ ಲಾಲ್ ದರ್ವಾಜ ಬಳಿ ಚೇತನ್ ನಂಜಿ ಎಂಬ ಪಾನಿಪೂರಿ ವ್ಯಾಪಾರಿ ತನ್ನ ಚಾಟ್ಸ್ ಐಟಂಗಳಲ್ಲಿ ಟಾಯ್ಲೆಟ್ ಕ್ಲೀನರ್ ಬಳಸುತ್ತಿದ್ದ. ಈ ಬಗ್ಗೆ ಅಹಮದಾಬಾದ್ ಮುನ್ಸಿಪಾಲ್ ಕಾರ್ಪೋರೇಷನ್'ಗೆ ಬಂದಿದ್ದ ದೂರು ಆಧರಿಸಿ ಪ್ರಯೋಗಾಲಯದಲ್ಲಿ ಪರೀಕ್ಷಿಸಿದಾಗ ಟಾಯ್ಲೆಟ್ ಕ್ಲೀನರ್'ನಲ್ಲಿರುವ ಒಕ್ಸಾಲಿಕ್ ಆಸಿಡ್ ಪತ್ತೆಯಾಗಿದೆ. 2009 ರಿಂದಲೂ ಈತ ಈ ಕೃತ್ಯ ಮಾಡುತ್ತಾ ಬಂದಿದ್ದಾನೆ.ವಿಚಾರಣೆ ನಡೆಸಿದ ನ್ಯಾಯಾಲಯವು 6 ತಿಂಗಳು ಶಿಕ್ಷೆ ವಿಧಿಸಿದೆ.