ಇನ್ನು ಎರಡೂ ಸದನಗಳಲ್ಲಿ ಇಂದಿನ ಕಾರ್ಯ ಕಲಾಪ ಪಟ್ಟಿಯಿಂದ ಪ್ರಶ್ನೋತ್ತರ ಕಲಾಪವನ್ನು ಕೈಬಿಡಲಾಗಿದೆ.
ಬೆಂಗಳೂರು(ಫೆ.14): ಇಂದು ವಿಧಾನ ಮಂಡಲ ಜಂಟಿ ಅಧಿವೇಶನದ ಕೊನೆಯ ದಿನವಾಗಿದ್ದು, ವಿಧಾನಸಭೆಯಲ್ಲಿ ಇಂದು ರಾಜ್ಯಪಾಲರ ಭಾಷಣದ ಮೇಲೆ ನಡೆದ ಚರ್ಚೆಗೆ ರಾಜ್ಯ ಸರ್ಕಾರ ಉತ್ತರ ನೀಡಲಿದೆ ಹಾಗೆಯೇ ಬಳಿಕ ಸದನ ವಂದನಾ ನಿರ್ಣಯ ಕೈಗೊಳ್ಳಲಿದೆ.
ಇನ್ನು ವಿಧಾನ ಪರಿಷತ್'ನಲ್ಲಿ ಕೂಡಾ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಸಿಎಂ ಉತ್ತರ ನೀಡಲಿದ್ದು, ಕಂಬಳಕ್ಕೆ ಅವಕಾಶ ಮಾಡಿಕೊಡುವ ತಿದ್ದುಪಡಿ ವಿಧೇಯಕ ಸೇರಿದಂತೆ ನಾಲ್ಕು ಪ್ರಮುಖ ವಿಧೇಯಕಗಳು ಅಂಗೀಕಾರಗೊಳ್ಳಲಿವೆ.
ಇನ್ನು ಐಟಿ ದಾಳಿ ಪ್ರಕರಣದಿಂದಾಗಿ ಸಚಿವ ರಮೇಶ್ ಜಾರಕಿಹೊಳಿ ಕೊನೆಯ ದಿನವಾದ ಇಂದಾದರೂ ಸದನಕ್ಕೆ ಹಾಜರಾಗುತ್ತಾರಾ, ವಿಪ್ ನೀಡಿದರೂ ಸದನಕ್ಕೆ ಗೈರಾದ ಅಡಳಿತ ಪಕ್ಷದ ಸದಸ್ಯರು ಸಿಎಂ ಭಾಷಣದ ವೇಳೆಗಾದರೂ ಇಂದು ಸದನಕ್ಕೆ ಹಾಜರಾಗುತ್ತಾರಾ? ಕಾದು ನೋಡಬೇಕು. ಇನ್ನು ಎರಡೂ ಸದನಗಳಲ್ಲಿ ಇಂದಿನ ಕಾರ್ಯ ಕಲಾಪ ಪಟ್ಟಿಯಿಂದ ಪ್ರಶ್ನೋತ್ತರ ಕಲಾಪವನ್ನು ಕೈಬಿಡಲಾಗಿದೆ.
ವರದಿ: ಕಿರಣ್ ಹನಿಯಡ್ಕ
