Asianet Suvarna News Asianet Suvarna News

ಇಂದಿನಿಂದ ‘ಸುಪ್ರೀಂ’ನಲ್ಲಿ ಕಾವೇರಿ ವಿಚಾರಣೆ: ಕರ್ನಾಟಕದ ವಾದಗಳೇನು?

ರಾಜ್ಯದಲ್ಲಿ ಮತ್ತೆ ಕಾವೇರಿ ಸದ್ದು ಮಾಡಲಾರಂಭಿಸಿದ್ದಾಳೆ. ಅಂದ್ರೆ ಕಾವೇರಿ ನ್ಯಾಯಾಧೀಕರಣ ನೀಡಿದ್ದ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ 3 ರಾಜ್ಯಗಳ ಅರ್ಜಿಗಳ ವಿಚಾರಣೆ ಇವತ್ತಿಂದ ಶುರುವಾಗಲಿದೆ. ಸುಪ್ರೀಂ ಕೋರ್ಟ್'​ನಲ್ಲಿ ಕರ್ನಾಟಕ, ತಮಿಳುನಾಡು ಮತ್ತು ಪಾಂಡಿಚೇರಿ ರಾಜ್ಯಗಳ ಅರ್ಜಿ ವಿಚಾರಣೆ ನಿರಂತರವಾಗಿ ನಡೆಯಲಿದೆ.

Today Onwards Cauvery Hearing Starts In Supreme Court
  • Facebook
  • Twitter
  • Whatsapp

ಬೆಂಗಳೂರು(ಜು.11): ರಾಜ್ಯದಲ್ಲಿ ಮತ್ತೆ ಕಾವೇರಿ ಸದ್ದು ಮಾಡಲಾರಂಭಿಸಿದ್ದಾಳೆ. ಅಂದ್ರೆ ಕಾವೇರಿ ನ್ಯಾಯಾಧೀಕರಣ ನೀಡಿದ್ದ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ 3 ರಾಜ್ಯಗಳ ಅರ್ಜಿಗಳ ವಿಚಾರಣೆ ಇವತ್ತಿಂದ ಶುರುವಾಗಲಿದೆ. ಸುಪ್ರೀಂ ಕೋರ್ಟ್'​ನಲ್ಲಿ ಕರ್ನಾಟಕ, ತಮಿಳುನಾಡು ಮತ್ತು ಪಾಂಡಿಚೇರಿ ರಾಜ್ಯಗಳ ಅರ್ಜಿ ವಿಚಾರಣೆ ನಿರಂತರವಾಗಿ ನಡೆಯಲಿದೆ.

ಕಾವೇರಿ ನ್ಯಾಯಾಧಿಕರಣದ ಆದೇಶ ಪ್ರಶ್ನಿಸಿ ಅರ್ಜಿ

2007 ರಲ್ಲಿ ಕಾವೇರಿ ನ್ಯಾಯಾಧಿಕರಣ ನೀಡಿದ್ದ ಆದೇಶ ಪ್ರಶ್ನಿಸಿ ಕರ್ನಾಟಕ ತಮಿಳುನಾಡು ಮತ್ತು ಕೇರಳ ರಾಜ್ಯ ಸರ್ಕಾರಗಳು ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಅರ್ಜಿಯನ್ನು ಸಲ್ಲಿಸಿದ್ದವು. ಆದ್ರೆ ಕಳ್ದ ವರ್ಷ ಕೇಂದ್ರ ಕೇಂದ್ರ ಸರ್ಕಾರ ನ್ಯಾಯಾಧಿಕರಣದ ಆದೇಶವನ್ನ ಪುರಸ್ಕರಿಸುವ ಅಥವಾ ತಿರಸ್ಕರಿಸುವ ಅಧಿಕಾರ ಕೇವಲ ಸಂಸತ್ತಿಗಿದೆ ಸುಪ್ರೀಂ ಕೋರ್ಟ್​​ಗೆ ಇಲ್ಲ ಅಂತ ಅರ್ಜಿಯೊಂದನ್ನು ಸಲ್ಲಿಸಿತ್ತು. ಇದನ್ನು ಒಪ್ಪದ ಸರ್ವೋಚ್ಛ ನ್ಯಾಯಾಲಯ ಸಂವಿಧಾನದ ಆರ್ಟಿಕಲ್ ೧೩೬ ರ ಪ್ರಕಾರ ಸುಪ್ರೀಂ ಕೋರ್ಟ್'ಗೆ ದೇಶದ ಯಾವುದೇ ಸ್ಥಳದಲ್ಲಿ ಉಂಟಾಗುವ ವ್ಯಾಜ್ಯಗಳನ್ನು ಪರಿಹರಿಸುವ ಅಂತಿಮ ಅಧಿಕಾರವಿದೆ ಅಂತ ತೀರ್ಪು ನೀಡಿತ್ತು.

ನಂತರ ಏಪ್ರಿಲ್'ನಲ್ಲಿ ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಅರ್ಜಿಗಳ ವಿಚಾರಣೆ ಆರಂಭಗೊಂಡು ರಾಜ್ಯದ ಪರ ಹಿರಿಯ ವಕೀಲ ಫಾಲಿ ನಾರಿಮನ್ ವಾದ ಮಂಡನೆ ಶುರು ಮಾಡಿದ್ದರು. ಆದ್ರೆ, ಬೇಸಿಗೆ ರಜೆ ಕಾರಣದಿಂದ ಇವತ್ತಿಂದ ದಿನವೂ ವಿಚಾರಣೆ ನಡೆಯಲಿದೆ. ನ್ಯಾಯಮೂರ್ತಿ ದೀಪಕ್ ಮಿಶ್ರಾ ಅಧ್ಯಕ್ಷತೆಯ ವಿಶೇಷ ಪೀಠದ ಎದುರು ದಿನವೂ ವಿಚಾರಣೆ ನಡೆಯಲಿದೆ.

ಕರ್ನಾಟಕದ ಪ್ರಮುಖ ವಾದಗಳು?

- ಬೆಂಗಳೂರಿನ ಕುಡಿಯುವ ನೀರಿನ ಬಗ್ಗೆ ಮೇಲ್ಮನವಿ

- ಕಾವೇರಿ ವ್ಯಾಪ್ತಿಗೆ ಬೆಂಗಳೂರು ಶೇ. 30 ರಷ್ಟು ಎಂಬುದಕ್ಕೆ ಆಕ್ಷೇಪ

- ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ತೀವ್ರ ವಿರೋಧ.

- ಅಗತ್ಯಕ್ಕಿಂತಲೂ ಹೆಚ್ಚಿನ ಪ್ರಮಾಣದ ನೀರು ತಮಿಳುನಾಡಿಗೆ ಸರಬರಾಜು

- ಮಳೆ ಮತ್ತು ನೀರಿನ ಅಗತ್ಯ ಪ್ರಮಾಣ ಆಧರಿಸಿ ನೀರಿನ ಹಂಚಿಕೆ ನಡೆಯಬೇಕು

- ರಾಜ್ಯಕ್ಕೆ ನೀರಿನ ಅಗತ್ಯ ಹೆಚ್ಚಿದ್ದಾಗ, ತಮಿಳುನಾಡಿಗೆ ನೀರಿನ ಸರಬರಾಜು ಸಾಧ್ಯವಿಲ್ಲ

ಸುಪ್ರೀಂ ಕೋರ್ಟ್​'ನಲ್ಲಿ ಇವತ್ತಿನಿಂದ ಶುರುವಾಗುವ ವಿಚಾರಣೆ ಕರ್ನಾಟಕದ ದೃಷ್ಟಿಯಿಂದ ತುಂಬಾನೆ ಮಹತ್ವದ್ದಾಗಿದೆ.. ಅದ್ರಲ್ಲೂ ಬೆಂಗಳೂರಿನ ಕೇವಲ 30ರಷ್ಟು ಭಾಗ ಮಾತ್ರ ಕಾವೇರಿ ಕಣಿವೆ ವ್ಯಾಪ್ತಿಗೆ ಎಂದಿರೋ ಟ್ರಿಬ್ಯುನಲ್​ ಆದೇಶಕ್ಕೆ ರಾಜ್ಯ ಸರ್ಕಾರ ವಿರೋಧ ವ್ಯಕ್ತಪಡಿಸಿದೆ. ಜತೆಗೆ ನೀರಿನ ಪ್ರಮಾಣದಲ್ಲೂ ಕೂಡ ತಮಿಳುನಾಡು ಹೆಚ್ಚಿನ ಪಾಲು ಪಡೆದಿದೆ ಅಂತ ಒತ್ತಾಯಿಸಿದೆ. ನೀರು ಅಗತ್ಯ ಪ್ರಮಾಣದಲ್ಲಿ ಸಂಗ್ರಹವಾಗದಿದ್ದಾಗ ಸಂಕಷ್ಟ ಸೂತ್ರ ವರ್ಷದ ಅಂತ್ಯದಲ್ಲಿ ತಮಿಳುನಾಡಿನಲ್ಲಿ ಬರುವ ಮಳೆಯನ್ನೂ ಲೆಕ್ಕ ಹಾಕಿಕೊಂಡು ರಚಿಸಬೇಕು ಅಂತಲೂ ರಾಜ್ಯ ಸರ್ಕಾರ ಪಟ್ಟು ಹಿಡ್ದಿದೆ. ಒಟ್ನಲ್ಲಿ ಇವತ್ತಿಂದ ಸುಪ್ರೀಂ ಕೋರ್ಟ್​​ನಲ್ಲಿ ಶುರುವಾಗೋ ಕಾವೇರಿ ಆದೇಶದ ವಿಚಾರಣೆ ದೇಶದ ಗಮನ ಸೆಳೆದಿದೆ.

Follow Us:
Download App:
  • android
  • ios