ರಾಜ್ಯದಲ್ಲಿ ಹೆಚ್ಚುತ್ತಿರುವ ಅಮಾನವೀಯ ಆಚರಣೆಗಳನ್ನು ತಡೆಯುವ ನಿಟ್ಟಿನಲ್ಲಿ ಸರ್ಕಾರ ಸಿದ್ಧಪಡಿಸಿರುವ ಹೊಸ ವಿಧೇಯಕವನ್ನು (ಕರ್ನಾಟಕ ಅಮಾನವೀಯ ದುಷ್ಟ ಪದ್ಧತಿಗಳ ಹಾಗೂ ವಾಮಾಚಾರ ಇವುಗಳ ಪ್ರತಿಬಂಧ ಮತ್ತು ನಿರ್ಮೂಲನೆ ವಿಧೇಯಕ -2017) ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ಮಂಡಿಸುವ ಸಂಭವವಿದೆ.

ಸುವರ್ಣಸೌಧ(ನ.14): ಬಹುನಿರೀಕ್ಷಿತ ಮೌಢ್ಯ ನಿಷೇಧ ಕುರಿತ ವಿಧೇಯಕ ಮತ್ತು ಬಡ್ತಿ ಮೀಸಲು ಕಲ್ಪಿಸುವ ತಿದ್ದುಪಡಿ ವಿಧೇಯಕ ಇಂದು ವಿಧಾನಸಭೆಯಲ್ಲಿ ಮಂಡನೆಯಾಗುವ ಸಾಧ್ಯತೆಯಿದೆ.

ರಾಜ್ಯದಲ್ಲಿ ಹೆಚ್ಚುತ್ತಿರುವ ಅಮಾನವೀಯ ಆಚರಣೆಗಳನ್ನು ತಡೆಯುವ ನಿಟ್ಟಿನಲ್ಲಿ ಸರ್ಕಾರ ಸಿದ್ಧಪಡಿಸಿರುವ ಹೊಸ ವಿಧೇಯಕವನ್ನು (ಕರ್ನಾಟಕ ಅಮಾನವೀಯ ದುಷ್ಟ ಪದ್ಧತಿಗಳ ಹಾಗೂ ವಾಮಾಚಾರ ಇವುಗಳ ಪ್ರತಿಬಂಧ ಮತ್ತು ನಿರ್ಮೂಲನೆ ವಿಧೇಯಕ -2017) ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ಮಂಡಿಸುವ ಸಂಭವವಿದೆ.

ಹಾಗೆಯೇ ಸುಪ್ರೀಂಕೋರ್ಟ್ ತೀರ್ಪಿನಿಂದ ಹಿಂಬಡ್ತಿ ಆತಂಕದಲ್ಲಿರುವ ಎಸ್ಸಿ, ಎಸ್ಟಿ ನೌಕರರಿಗೆ ನೆರವಾಗುವಂತೆ (ರಾಜ್ಯ ಸಿವಿಲ್ ಸೇವೆಗಳಲ್ಲಿನ ಹುದ್ದೆಗಳಿಗೆ ಮೀಸಲು ಆಧಾರದ ಮೇಲೆ ಬಡ್ತಿ ಹೊಂದಿರುವ ಸರ್ಕಾರಿ ನೌಕರರಿಗೆ ತತ್ಪರಿಣಾಮವಾದ ಜೇಷ್ಠತೆ ವಿಸ್ತರಿಸುವ ವಿಧೇಯಕ-2017) ವಿಧೇಯಕವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಲಿದ್ದಾರೆ.

ಸೋಮವಾರ ಆಡಳಿತ ಪಕ್ಷದ ಸಾಲಿನಲ್ಲಿ ಸಚಿವ ಕಾಗೋಡು ತಿಮ್ಮಪ್ಪ ಹಾಗೂ ಡಿ.ಕೆ.ಶಿವಕುಮಾರ್ ಸೇರಿದಂತೆ ಕೇವಲ ಏಳು ಮಂದಿ ಶಾಸಕರು ಹಾಜರಿದ್ದರೆ, ಪ್ರತಿಪಕ್ಷ ಬಿಜೆಪಿ ಸಾಲಿನಲ್ಲಿ ಕೇವಲ 12 ಮಂದಿ ಶಾಸಕರು ಹಾಗೂ ಜೆಡಿಎಸ್‌'ನ ಇಬ್ಬರು ಶಾಸಕರು ಹಾಜರಿದ್ದರು. ಎಂಇಎಸ್ ಬೆಂಬಲಿತ ಇಬ್ಬರು ಶಾಸಕರು ಕೂಡ ಹಾಜರಿದ್ದರು