ಬ್ರಿಗೇಡ್ ರಸ್ತೆ, ರಿಚ್‌'ಮಂಡ್ ರಸ್ತೆ ಸೇರಿದಂತೆ ಈ ಭಾಗದ ಪ್ರಮುಖ ರಸ್ತೆಗಳಲ್ಲಿ ತಡ ರಾತ್ರಿಯವರೆಗೂ ಸಂಭ್ರಮಾಚರಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಮೆಟ್ರೋ ಸಂಚಾರವನ್ನು ತಡ ರಾತ್ರಿಯ ನಂತರವೂ ಸಂಚರಿಸಲು ವ್ಯವಸ್ಥೆ ಕಲ್ಪಿಸಲಾಗಿದೆ.

ಬೆಂಗಳೂರು(ಡಿ.31): ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಡಿಸೆಂಬರ್ 31ರಂದು ರಾತ್ರಿ 2 ಗಂಟೆಯವರೆಗೂ ನಮ್ಮ ಮೆಟ್ರೋ ರೈಲು ಸಂಚರಿಸಲಿದೆ. ಮಹಾತ್ಮಾಗಾಂಧಿ ರಸ್ತೆ,

ಬ್ರಿಗೇಡ್ ರಸ್ತೆ, ರಿಚ್‌'ಮಂಡ್ ರಸ್ತೆ ಸೇರಿದಂತೆ ಈ ಭಾಗದ ಪ್ರಮುಖ ರಸ್ತೆಗಳಲ್ಲಿ ತಡ ರಾತ್ರಿಯವರೆಗೂ ಸಂಭ್ರಮಾಚರಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಮೆಟ್ರೋ ಸಂಚಾರವನ್ನು ತಡ ರಾತ್ರಿಯ ನಂತರವೂ ಸಂಚರಿಸಲು ವ್ಯವಸ್ಥೆ ಕಲ್ಪಿಸಲಾಗಿದೆ.

ಡಿ.31ರಂದು ರಾತ್ರಿ 11ರ ಬಳಿಕ ಟ್ರಿನಿಟಿ ವೃತ್ತ, ಎಂಜಿ ರಸ್ತೆ ಹಾಗೂ ಕಬ್ಬನ್ ಪಾರ್ಕ್ ನಿಲ್ದಾಣಗಳಿಂದ ಪ್ರಯಾಣ ಪ್ರಾರಂಭಿಸುವವರಿಗೆ ಸರಾಸರಿ 50 ರು.ಗಳನ್ನು ಬಿಎಂಆರ್‌'ಸಿಎಲ್ ನಿಗದಿ ಪಡಿಸಿದೆ. ಜನದಟ್ಟನೆ ನಿಯಂತ್ರಿಸುವ ಸಲುವಾಗಿ 50ರು.ಗಳನ್ನು ನಿಗದಿ ಪಡಿಸಲಾಗಿದೆ. ಆದರೆ, ಸ್ಮಾರ್ಟ್‌'ಕಾರ್ಡ್ ಹೊಂದಿರುವವರಿಗೆ ಯಾವುದೇ ರೀತಿಯ ಬದಲಾವಣೆ ಇರುವುದಿಲ್ಲ. ಸಾಮಾನ್ಯವಾಗಿ ಲಭ್ಯವಿರುವ ರಿಯಾಯಿತಿ ಮುಂದುವರಿಯಲಿದೆ.