Asianet Suvarna News Asianet Suvarna News

ಕಾಂಗ್ರೆಸ್‌ ಅಭ್ಯರ್ಥಿ ಆಯ್ಕೆ ಕಸರತ್ತು ಇಂದು ಆರಂಭ

ಮುಂಬ​ರುವ ವಿಧಾ​ನ​ಸಭಾ ಚುನಾ​ವಣೆಗೆ ಅಭ್ಯ​ರ್ಥಿ​ಗಳ ಆಯ್ಕೆಗೆ ಕಾಂಗ್ರೆಸ್‌ ಪಕ್ಷದ ಪ್ರಪ್ರ​ಥಮ ಅಧಿ​ಕೃತ ಕಸ​ರತ್ತು ನಗ​ರದ ಹೊರ​ವ​ಲ​ಯದ ರೆಸಾ​ರ್ಟ್‌​ನಲ್ಲಿ ಬುಧ​ವಾರ ನಡೆ​ಯ​ಲಿದೆ.

Today Congress Leaders Decide Candidate List

ಬೆಂಗ​ಳೂರು : ಮುಂಬ​ರುವ ವಿಧಾ​ನ​ಸಭಾ ಚುನಾ​ವಣೆಗೆ ಅಭ್ಯ​ರ್ಥಿ​ಗಳ ಆಯ್ಕೆಗೆ ಕಾಂಗ್ರೆಸ್‌ ಪಕ್ಷದ ಪ್ರಪ್ರ​ಥಮ ಅಧಿ​ಕೃತ ಕಸ​ರತ್ತು ನಗ​ರದ ಹೊರ​ವ​ಲ​ಯದ ರೆಸಾ​ರ್ಟ್‌​ನಲ್ಲಿ ಬುಧ​ವಾರ ನಡೆ​ಯ​ಲಿದೆ.

ಕೆಪಿ​ಸಿಸಿ ಅಧ್ಯಕ್ಷ ಡಾ.ಜಿ.ಪ​ರ​ಮೇ​ಶ್ವರ್‌ ಹಾಗೂ ಮುಖ್ಯ​ಮಂತ್ರಿ ಸಿದ್ದ​ರಾ​ಮಯ್ಯ ಅವರ ನೇತೃ​ತ್ವ​ದಲ್ಲಿ ನಡೆ​ಯ​ಲಿ​ರುವ ಈ ಸಭೆ​ಯಲ್ಲಿ ರಾಜ್ಯ ಕಾಂಗ್ರೆ​ಸ್‌ನ ಎಲ್ಲಾ ಪ್ರಮುಖ ನಾಯ​ಕರು ಸೇರಿ​ದಂತೆ ಒಟ್ಟು 43 ಮಂದಿ ಪಾಲ್ಗೊ​ಳ್ಳ​ಲಿ​ದ್ದಾರೆ.

ಮುಂಬ​ರುವ ಚುನಾ​ವ​ಣೆಗೆ ರಾಜ್ಯದ ಎಲ್ಲಾ ವಿಧಾ​ನ​ಸಭಾ ಕ್ಷೇತ್ರ​ಗಳ ಆಕಾಂಕ್ಷಿ​ಗಳು ಸಲ್ಲಿ​ಸಿ​ರುವ ಅರ್ಜಿ​ಗಳ ಪರಿ​ಶೀ​ಲನೆ ಹಾಗೂ ಈ ಕ್ಷೇತ್ರ​ಗಳ ಬಗ್ಗೆ ಕೆಪಿ​ಸಿಸಿ ಹಾಗೂ ಮುಖ್ಯಮಂತ್ರಿ ಸಿದ್ದ​ರಾ​ಮಯ್ಯ ಅವರು ಪ್ರತ್ಯೇಕವಾಗಿ ನಡೆ​ಸಿದ ಸರ್ವೇ ಪ್ರಕಾರ ಯಾರಿಗೆ ಟಿಕೆಟ್‌ ನೀಡು​ವುದು ಸೂಕ್ತ ಎಂಬ ಬಗ್ಗೆ ಸುದೀರ್ಘ ಚರ್ಚೆ ನಡೆ​ಸ​ಲಿ​ದೆ.

ಮೂಲ​ಗಳ ಪ್ರಕಾರ ನಾಳಿನ ಸಭೆಯ ಅಂತ್ಯದ ವೇಳೆಗೆ ಪ್ರತಿ ವಿಧಾ​ನ​ಸಭಾ ಕ್ಷೇತ್ರದ ಬಗ್ಗೆಯೂ ಸಂಭಾವ್ಯ ಅಭ್ಯ​ರ್ಥಿ​ಗಳ ಪ್ಯಾನಲ್‌ವೊಂದನ್ನು ರಾಜ್ಯ ನಾಯ​ಕತ್ವ ಸಿದ್ಧಪ​ಡಿ​ಸಿ​ಕೊ​ಳ್ಳ​ಲಿದ್ದು, ಅದನ್ನು ಹೈಕ​ಮಾಂಡ್‌ಗೆ ಸಲ್ಲಿ​ಸ​ಲಿ​ದೆ. ಇದರ ಆಧಾ​ರದ ಮೇಲೆ ಕಾಂಗ್ರೆ​ಸ್‌​ ಕೇಂದ್ರ ಸಮಿ​ತಿಯು ಮಾಚ್‌ರ್‍ ಮಾಸಾಂತ್ಯಕ್ಕೆ ಸಭೆ ಸೇರ​ಲಿದ್ದು, ಸುಮಾರು 100ರಿಂದ 150 ಕ್ಷೇತ್ರ​ಗಳಿಗೆ ಅಭ್ಯ​ರ್ಥಿ​ಗಳ ಪಟ್ಟಿ​ಯನ್ನು ಅಖೈರು ಮಾಡ​ಲಿದೆ ಎಂದು ಮೂಲ​ಗಳು ಹೇಳಿ​ವೆ.

ಬುಧ​ವಾ​ರದ ಸಭೆ​ಯಲ್ಲಿ ರಾಜ್ಯ ಉಸ್ತು​ವಾರಿ ವೇಣು​ಗೋ​ಪಾಲ್‌, ಮುಖಂಡ​ರಾದ ಮಲ್ಲಿ​ಕಾ​ರ್ಜುನ ಖರ್ಗೆ, ಡಿ.ಕೆ. ಶಿವ​ಕು​ಮಾರ್‌, ಎಸ್‌.​ಆರ್‌. ಪಾಟೀಲ್‌, ದಿನೇಶ್‌ ಗುಂಡೂ​ರಾವ್‌, ಆಸ್ಕರ್‌ ಫರ್ನಾಂಡಿಸ್‌, ಬಿ.ಕೆ. ಹರಿ​ಪ್ರ​ಸಾದ್‌ ಸೇರಿ​ದಂತೆ 43 ಮಂದಿ ಮುಖಂಡರು ಪಾಲ್ಗೊ​ಳ್ಳು​ವ​ರು.

Follow Us:
Download App:
  • android
  • ios