ಇನ್ನೂ ಕರಗುತ್ತಿಲ್ಲವಾ ವೈದ್ಯರ ಕರುಳು..? ವೈದ್ಯರೇ ಯಾವಾಗ ನಿಲ್ಲಿಸುತ್ತೀರಾ ಎಂಬ ಕೂಗು ಜೋರಾಗಿದ್ದು, ರೋಗಿಗಳ ಪರದಾಟ ಕೇಳುವವರೆ ಇಲ್ಲ ಎಂಬಂತಾಗಿದೆ.
ಬೆಂಗಳೂರು(ನ.15): ಖಾಸಗಿ ವೈದ್ಯರು ರಾಜ್ಯಾದ್ಯಂತ ನಡೆಸುತ್ತಿರುವ ಪ್ರತಿಭಟನೆಗೆ ಈಗಾಗಲೇ 10 ಮಂದಿ ಮೃತಪಟ್ಟಿದ್ದರೂ ಇಂದು ಕೂಡಾ ಪ್ರತಿಭಟನೆ ಮುಂದುವರೆಸಿದ್ದಾರೆ.
ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣ ತಿದ್ದುಪಡಿ ವಿಧೇಯಕಕ್ಕೆ ಪಟ್ಟು ಹಿಡಿದಿರುವ ಆರೋಗ್ಯ ಸಚಿವ ರಮೇಶ್ ಕುಮಾರ್ ನಿಲುವಿಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಖಾಸಗಿ ವೈದ್ಯರು ಇಂದೂ ಸಹ ಪ್ರತಿಭಟನೆ ಮುಂದುವರೆಸಿದ್ದಾರೆ.
ಇನ್ನೂ ಕರಗುತ್ತಿಲ್ಲವಾ ವೈದ್ಯರ ಕರುಳು..? ವೈದ್ಯರೇ ಯಾವಾಗ ನಿಲ್ಲಿಸುತ್ತೀರಾ ಎಂಬ ಕೂಗು ಜೋರಾಗಿದ್ದು, ರೋಗಿಗಳ ಪರದಾಟ ಕೇಳುವವರೆ ಇಲ್ಲ ಎಂಬಂತಾಗಿದೆ. ಒಟ್ಟಾರೆ ಸರ್ಕಾರ ಹಾಗೂ ಖಾಸಗಿ ವೈದ್ಯರ ಜಗಳದಲ್ಲಿ ರೋಗಿಗಳು ಪರದಾಡುವ ಪರಿಸ್ಥಿತಿ ಎದುರಿಸುವಂತಾಗಿದೆ.
