ಸಾಂಪ್ರದಾಯಿಕ ಇಂಧನಗಳನ್ನು ನೆಚ್ಚಿಕೊಂಡವರಿಗೆ ಸಚಿವ ಅರುಣ್ ಜೇಟ್ಲಿ ಸಿಹಿ ಸುದ್ದಿ ನೀಡಿದ್ದಾರೆ.

ನವದೆಹಲಿ (ಫೆ.01): ತಂಪಾಕು ಉತ್ಪನ್ನಗಳ ಮೇಲೆ ತೆರಿಗೆಗಳನ್ನು ಏರಿಕೆ ಮಾಡುವ ಮೂಲಕ ತಂಬಾಕು ಪ್ರಿಯರ ಕಿಸೆಗೆ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಬಿಸಿ ಮುಟ್ಟಿಸಿದ್ದಾರೆ. ಜತೆಗೆ ಸಾಂಪ್ರದಾಯಿಕ ಇಂಧನಗಳನ್ನು ನೆಚ್ಚಿಕೊಂಡವರಿಗೆ ಸಚಿವರು ಸಿಹಿ ಸುದ್ದಿ ನೀಡಿದ್ದಾರೆ.

ಇನ್ಮುಂದೆ ಈ ವಸ್ತುಗಳು ದುಬಾರಿ:

ಸಿಗರೇಟ್, ಪಾನ್ ಮಸಾಲಾ, ಸಿಗಾರ್, ಬೀಡಿ, ತಂಬಾಕು ಉತ್ಪನ್ನಗಳು

ಎಲ್'ಇಡಿ ದೀಪದ ಭಾಗಗಳು

ಗೋಡಂಬಿ

ಅಲ್ಯುಮಿನಿಯಂ ಅದಿರು

ಬೆಳ್ಳಿ ನಾಣ್ಯ ಹಾಗೂ ಮೆಡಲ್'ಗಳು

ಮೊಬೈಲ್ ಫೋನ್'ನಲ್ಲಿ ಬಳಸಲಾಗುವ ಪ್ರಿಂಟೆಡ್ ಸರ್ಕ್ಯೂಟ್ ಬೋರ್ಡ್

ಈ ವಸ್ತುಗಳು ಅಗ್ಗ:

ಆನ್'ಲೈನ್ ಖರೀದಿಸಿದ ರೈಲ್ವೇ ಟಿಕೆಟ್

ಸೋಲಾರ್ ಪ್ಯಾನೆಲ್'ನಲ್ಲಿ ಬಳಸಲಾಗುವ ಗಾಜು

ಪವನಶಕ್ತಿಯಿಂದ ಓಡುವ ಜನರೇಟರ್

ಪಿಓಎಸ್ ಮಶೀನ್'ಗಳು, ಬಯೋಮೆಟ್ರಿಕ್ ಯಂತ್ರಗಳು

ರಕ್ಷಣಾ ಸೇವೆಗಳಿಗೆ ಸಾಮೂಹಿಕ ವಿಮೆ