ಅಕ್ಷಯ ತೃತೀಯ ಬಂದಿದೆ ಅಂದ ತಕ್ಷಣ ಎಲ್ಲರೂ ಆಭರಣದ ಅಂಗಡಿಗೆ ಲಗ್ಗೆ ಹಾಕುವ ಪದ್ಧತಿ ಸಾಮಾನ್ಯವಾಗಿ ಬಿಟ್ಟಿದೆ. ಅಂದು ಖರೀದಿಸಿದ ಅಥವಾ ಪೂಜೆ ಮಾಡಿದ ಅಮೂಲ್ಯ ವಸ್ತುಗಳು ಅಕ್ಷಯವಾಗುತ್ತವೆ ಎಂಬ ನಂಬಿಕೆಯೂ ಇದೆ. ಚಿನ್ನ, ವಜ್ರಕ್ಕಿಂತಲೂ ಅಮೂಲ್ಯವಾದದ್ದು ಒಂದಿದೆ, ಅದುವೇ ಜೀವ ಜಲ..
ಬೆಂಗಳೂರು[ಏ. 27] ಜೀವ ಜಲದ ರಕ್ಷಣೆ, ಸಂರಕ್ಷಣೆ, ಮಿತ ಬಳಕೆ ಬಗ್ಗೆ ಮತ್ತೆ ಮಾತನಾಡಲೇ ಬೇಕಿದೆ. ಹಿರಿಯ ಐಎಎಸ್ ಅಧಿಕಾರಿ ಶಾಲಿನಿ ರಜನೀಶ್ ಸಹ ತಮ್ಮ ಸೋಶಿಯಲ್ ಮೀಡಿಯಾ ಮೂಲಕ ಜಲ ಸಂರಕ್ಷಣೆಯ ಮನವಿ ಮಾಡಿದ್ದಾರೆ.
ಸಂಪೂರ್ಣ ಬರಿದಾಗುತ್ತಿದೆ ಬೆಂಗಳೂರು ಅಂತರ್ಜಲ : ಬರಡಾಗುತ್ತಿದೆ ನಗರ!
ಮೇ 7ಕ್ಕೆ ಅಕ್ಷಯ ತೃತೀಯಾ ಸಂಭ್ರಮ ಇದೆ. ಚಿನ್ನ, ವಜ್ರಕ್ಕಿಂತ ಅಮೂಲ್ಯವಾದ ಜೀವ ಜಲವನ್ನು ಅಂದು ಪೂಜಾ ಕೋಣೆಯಲ್ಲಿಟ್ಟು ಪೂಜಿಸಿ, ನಿಮ್ಮ ಬಳಿ ಎಷ್ಟು ಸಾಧ್ಯವೋ ಅಷ್ಟು ನೀರಿ ಉಳಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.
