ಲಖನೌ[ಸೆ.09]: ದೇಶದ ಅತಿದೊಡ್ಡ ರಾಜ್ಯಗಳಲ್ಲಿ ಒಂದಾದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಹಾಗೂ ಅವರ ಸಂಪುಟ ಸದಸ್ಯರು ನಾಯಕತ್ವ ಮತ್ತು ಆಡಳಿತದ ಕುರಿತಾಗಿ ಇಲ್ಲಿನ ಪ್ರತಿಷ್ಠಿತ ಐಐಎಂನಲ್ಲಿ ವಿದ್ಯಾರ್ಥಿಗಳ ರೀತಿ ಕುಳಿತು ಪಾಠವನ್ನು ಆಲಿಸಿದರು.

ನಾಯಕತ್ವ ಗುಣಗಳ ವೃದ್ಧಿಸಿಕೊಳ್ಳುವಿಕೆಯ ಮಂಥನ ಕಾರ್ಯಕ್ರಮದ ಭಾಗವಾಗಿ ಸಿಎಂ ಯೋಗಿ ಹಾಗೂ ಅವರ ಸಹೋದ್ಯೋಗಿಗಳು ವಾಣಿಜ್ಯ ವಿಭಾಗದ ಹಿರಿಯ ಬೋಧಕ ಸಿಬ್ಬಂದಿಯಿಂದ ತರಬೇತಿ ಪಡೆದರು.

ಬಳಿಕ ಈ ಬಗ್ಗೆ ಮಾತನಾಡಿದ ಯೋಗಿ, ‘ಜೀವನದಲ್ಲಿ ಬರುವ ಕಲಿಕೆಯ ಅವಕಾಶಗಳನ್ನು ಬಾಚಿಕೊಳ್ಳಬೇಕು’ ಎಂದು ಹೇಳಿದರು. ರಾಜ್ಯದ ಸರ್ವಾಂಗೀಣ ಅಭಿವೃದ್ಧಿ ಕೈಗೊಳ್ಳಲು ಇಂಥ ತರಬೇತಿಗಳು ಅತ್ಯಗತ್ಯ ಎಂದು ಯೋಗಿ ಪ್ರತಿಪಾದಿಸಿದರು.