ಐಜ್ವಾಲ್‌[ಜು.25]: ಕ್ರಿಶ್ಚಿಯನ್‌ ಪಂಗಡದ ವಿರೋಧಿ ಎಂಬ ಹಣೆಪಟ್ಟಿಯನ್ನು ಕಳಚಿಕೊಳ್ಳಲು ಬಿಜೆಪಿ, ಕ್ರೈಸ್ತರೇ ಹೆಚ್ಚಿನ ಸಂಖ್ಯೆಯಲ್ಲಿರುವ ಮಿಜೋರಾಂ ರಾಜ್ಯದಲ್ಲಿ ‘ಮಿಷನರಿ ಸೆಲ್‌’ಗಳನ್ನು ಸ್ಥಾಪಿಸಿದೆ. ಈ ಮೂಲಕ ತಾನು ಅಲ್ಪಸಂಖ್ಯಾತರ ವಿರೋಧಿ ಅಲ್ಲ ಎಂಬುದನ್ನು ಸಾರಿದೆ. ಮಿಜೋರಾಂನಲ್ಲಿ ಶೇ.87 ರಷ್ಟುಕ್ರಿಶ್ಚಿಯನ್ನರೇ ಇದ್ದಾರೆ.

ಬಿಜೆಪಿ ಕ್ರಿಶ್ಚಿಯನ್ನರ ಏಳ್ಗೆ ಬಯಸಲ್ಲ ಎಂದು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಮತ್ತು ಕೆಲ ಚಚ್‌ರ್‍ಗಳು ಪ್ರಮುಖ ಅಸ್ತ್ರವಾಗಿ ಬಳಸಿಕೊಂಡಿದ್ದವು. ಇದರಿಂದ ವಿಮುಕ್ತರಾಗಲು ಬಿಜೆಪಿ ಈ ಹೆಜ್ಜೆ ಇಟ್ಟಿದೆ.

ಬಿಜೆಪಿಯ ಈ ಐಡಿಯಾ ಕ್ಲಿಕ್ ಆಗುತ್ತಾ? ಕ್ರೈಸ್ತರ ವಿಶ್ವಾಸ ಗಳಿಸುತ್ತಾ? ಕಾಲವೇ ಉತ್ತರಿಸಬೇಕಿದೆ.