ಲಕ್ನೋ(ಜೂ.17): ಪ್ಲ್ಯಾಸ್ಟಿಕ್ ತ್ಯಾಜ್ಯದಿಂದ ಪರಿಸರ ನಾಶ ಖಂಡಿತ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ವಸುಧೆಯನ್ನು ಇಂಚು ಇಂಚಾಗಿ ಬರಿದು ಮಾಡುತ್ತಿರುವ ಈ ಪ್ಲ್ಯಾಸ್ಟಿಕ್ ಎಂಬ ಭೂತ, ಮಾನವ ನಾಗರಿಕತೆಗೆ ಭಾರೀ ಸವಾಲು ತಂದೊಡ್ಡಿದೆ.

ಆದರೆ ಇದೇ ಪ್ಲ್ಯಾಸ್ಟಿಕ್ ತ್ಯಾಜ್ಯ ಬಳಸಿ ರಸ್ತೆ ನಿರ್ಮಿಸಿದರೆ ಹೇಗಿರುತ್ತೆ?. ಅರೆ! ಪ್ಲ್ಯಾಸ್ಟಿಕ್ ತ್ಯಾಜ್ಯದಿಂದ ರಸ್ತೆ ನಿರ್ಮಿಸಲು ಹೇಗೆ ಸಾಧ್ಯ ಅಂತೀರಾ?. ಸಾಧ್ಯ ಎಂದಿದೆ ಉತ್ತರಪ್ರದೇಶದ ರಾಜಧಾನಿ ಲಕ್ನೋ ಮಹಾನಗರ ಪಾಲಿಕೆ.

ಇಲ್ಲಿನ ಗೋಮಟಿ ನಗರದ ಪೊಲೀಸ್ ಠಾಣೆಯಿಂದ ಐಐಎಂ ಗೆ ಸಾಗುವ ಮಾರ್ಗದಲ್ಲಿ ಲಕ್ನೋ ಅಭಿವೃದ್ಧಿ ಪ್ರಾಧಿಕಾರ(LDA) ಹೊಸದಾಗಿ ರಸ್ತೆ ನಿರ್ಮಿಸಿದೆ. ಈ ರಸ್ತೆ ನಿರ್ಮಾಣಕ್ಕೆ ನಗರದಲ್ಲಿ ಸಂಗ್ರಹಿಸಲಾದ ಪ್ಲ್ಯಾಸ್ಟಿಕ್ ತ್ಯಾಜ್ಯವನ್ನು ಇದಕ್ಕೆ ಬಳಸಲಾಗಿದೆ.

ಡಾಂಬರೀಕರಣಕ್ಕೆ ಪ್ಲ್ಯಾಸ್ಟಿಕ್ ತ್ಯಾಜ್ಯ ಬಳಸುವುದರಿಂದ ರಸ್ತೆ ಸುಮಾರು ಶೇ.40-50 ರಷ್ಟು ಹೆಚ್ಚು ಬಾಳಿಕೆ ಬರುತ್ತದೆ ಎನ್ನುತ್ತಾರೆ ಲಕ್ನೋ ಅಭಿವೃದ್ಧಿ ಪ್ರಾಧಿಕಾರದ ಚೀಫ್ ಇಂಜಿನಿಯರ್.