ಹಾಲಿ ತರಬೇತಿಯಲ್ಲಿರುವ ಐಪಿಎಸ್ ಅಧಿಕಾರಿ ಸಫೀರ್ ಖಾನ್ ಸೋಮವಾರ ನಡೆದ ಯುಪಿಎಸ್‌ಸಿ ಮೇನ್ ಪರೀಕ್ಷೆಗೆ ಹಾಜರಾಗಿದ್ದ.

ಚೆನ್ನೈ(ಅ.30): ಐಎಎಸ್ ಅಧಿಕಾರಿಯಾಗುವ ಆಸೆ ಹೊತ್ತಿದ್ದ ಐಪಿಎಸ್ ಅಧಿಕಾರಿಯೊಬ್ಬ, ಯುಪಿಎಸ್‌ಸಿ ಪರೀಕ್ಷೆ ವೇಳೆ ಹೈಟೆಕ್ ಕಾಪಿ ಮಾಡಲು ಹೋಗಿ ಸಿಕ್ಕಿಬಿದ್ದ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ಹಾಲಿ ತರಬೇತಿಯಲ್ಲಿರುವ ಐಪಿಎಸ್ ಅಧಿಕಾರಿ ಸಫೀರ್ ಖಾನ್ ಸೋಮವಾರ ನಡೆದ ಯುಪಿಎಸ್‌ಸಿ ಮೇನ್ ಪರೀಕ್ಷೆಗೆ ಹಾಜರಾಗಿದ್ದ. ಈ ವೇಳೆ ಆತ ಕಿವಿಯಲ್ಲಿ ಬ್ಲೂಟೂತ್ ಉಪಕರಣ ಇಟ್ಟುಕೊಂಡು ಹೈದ್ರಾಬಾದ್‌ನಲ್ಲಿದ್ದ ತನ್ನ ಪತ್ನಿಯ ಮೂಲಕ ಉತ್ತರ ಪಡೆದುಕೊಳ್ಳುತ್ತಿದ್ದ. ಆದರೆ ತಪಾಸಣೆ ವೇಳೆ ಈತ ಸಿಕ್ಕಿಬಿದ್ದಿದ್ದಾನೆ.