ಒಬ್ಬನ ಜತೆ ನಿಶ್ಚಿತಾರ್ಥ ಮಾಡಿಕೊಂಡ ಯುವತಿ ಬೇರೆ ಯುವಕನ ಜೊತೆ ಮದುವೆಯಾಗಿದ್ದಾಳೆ. ಮದರಂಗಿ ಶಾಸ್ತ್ರ ಮುಗಿಸಿಕೊಂಡ ನಂತರ ಸಿನಿಮೀಯ ಶೈಲಿಯಲ್ಲಿ ಎಸ್ಕೇಪ್ ಆಗಿದ್ದಳು. ಬೆಂಗಳೂರು ಮೂಲದ ಇಂಜಿನಿಯರ್ ಜತೆ ಎರಡು ತಿಂಗಳ ಹಿಂದೆ ಆಕೆಗೆ ನಿಶ್ಚಿತಾರ್ಥವಾಗಿತ್ತು. ಆದ್ರೆ ಮದುವೆಗೂ ಮುನ್ನ ಆಕೆ ಮಧ್ಯಪ್ರದೇಶದ ಇಂದೋರ್ ಯುವಕನ ಜೊತೆ ಮದುವೆಯಾಗಿದ್ದಳು. ಹೀಗಾಗಿ ಇಂದು ನಡೆಯಬೇಕಿದ್ದ ಮದುವೆ ರದ್ದಾಗಿದೆ.
ಬೆಂಗಳೂರು: ಒಬ್ಬನ ಜತೆ ನಿಶ್ಚಿತಾರ್ಥ ಮಾಡಿಕೊಂಡ ಯುವತಿ ಬೇರೆ ಯುವಕನ ಜೊತೆ ಮದುವೆಯಾಗಿದ್ದಾಳೆ. ಮದರಂಗಿ ಶಾಸ್ತ್ರ ಮುಗಿಸಿಕೊಂಡ ನಂತರ ಸಿನಿಮೀಯ ಶೈಲಿಯಲ್ಲಿ ಎಸ್ಕೇಪ್ ಆಗಿದ್ದಳು. ಬೆಂಗಳೂರು ಮೂಲದ ಇಂಜಿನಿಯರ್ ಜತೆ ಎರಡು ತಿಂಗಳ ಹಿಂದೆ ಆಕೆಗೆ ನಿಶ್ಚಿತಾರ್ಥವಾಗಿತ್ತು. ಆದ್ರೆ ಮದುವೆಗೂ ಮುನ್ನ ಆಕೆ ಮಧ್ಯಪ್ರದೇಶದ ಇಂದೋರ್ ಯುವಕನ ಜೊತೆ ಮದುವೆಯಾಗಿದ್ದಳು. ಹೀಗಾಗಿ ಇಂದು ನಡೆಯಬೇಕಿದ್ದ ಮದುವೆ ರದ್ದಾಗಿದೆ.



ಈ ಘಟನೆ ನಡೆದಿರೋದು ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಯಸಳೂರು ಹೋಬಳಿಯಲ್ಲಿ. ಯಸಳೂರು ಹೋಬಳಿಯ ಯುವತಿಗೆ ಬೆಂಗಳೂರು ಮೂಲದ ಇಂಜಿನಿಯರ್ ಜತೆ ವಿವಾಹ ನಿಶ್ಚಯವಾಗಿ, ಇಂದು ಮದುವೆ ನಡೆಯಬೇಕಿತ್ತು. ಮೊನ್ನೆ ಮದರಂಗಿ ಶಾಸ್ತ್ತವೂ ವಧುವಿನ ಮನೆಯಲ್ಲಿ ನಡೆದಿತ್ತು. ಆದರೆ, ಶಾಸ್ತ್ರ ಮುಗಿದು ಎಲ್ಲರೂ ಮಲಗಿದ ಮೇಲೆ ನಿನ್ನೆ ಮುಂಜಾನೆ ವಧು ಸಿನಿಮೀಯ ಶೈಲಿಯಲ್ಲಿ ಮನೆಯಿಂದಾಚೆ ಹೋಗಿದ್ದಳು. ಎಲ್ಲರೂ ಹುಡುಕಾಟ ನಡೆಸುತ್ತಿರುವಾಗ ವರನ ಮೊಬೈಲ್’ಗೆ ವಾಟ್ಸಪ್ ಮೂಲಕ ಇಂದೋರ್ ಯುವಕನನ್ನು ಮದ್ವೆಯಾಗಿರುವ ಫೋಟೋ ಕಳುಹಿಸಿದ್ದಾಳೆ.
ದುರಂತ ಅಂದ್ರೆ ನವೆಂಬರ್ 11ರಂದೇ ಇಂದೋರ್ ಯುವಕನ ಜತೆ ಮದ್ವೆಯಾಗಿದೆ. ಬಳಿಕ ಎಂಗೇಜ್ ಆದ ಯುವಕನ ಜೊತೆ ಮದರಂಗಿ ಶಾಸ್ತ್ರದಲ್ಲಿ ಭಾಗವಹಿಸಿದ್ದಳು. ನಂತರ ಮುಂಜಾನೆ ಫಿಲ್ಮಿ ಸ್ಟೈಲ್ ನಲ್ಲಿ ಎಸ್ಕೇಪ್ ಆಗಿದ್ದಳು. ಆಕೆ ಈಗಾಗಲೇ ಮದ್ವೆಯಾಗಿರೋ ಫೋಟೋ ಹಾಗೂ ವಿವಾಹ ಪ್ರಮಾಣ ಪತ್ರಗಳನ್ನು ವರನ ವಾಟ್ಸಪ್ ಗೆ ಕಳಿಸಿದ್ದರಿಂದ ಇಂದು ನಡೆಯಬೇಕಿದ್ದ ಮದುವೆ ಸಮಾರಂಭ ರದ್ದಾಗಿದೆ. ಎರಡು ಮನೆಗಳಲ್ಲಿ ಸಡಗರ ಮಾಯವಾಗಿ, ಶಾಕ್ ಆಗಿದ್ದಾರೆ.
