ತಮಿಳುನಾಡಿನ ಯಾವ ಚಿತ್ರಮಂದಿರದಲ್ಲೂ ಕನ್ನಡ ಸಿನಿಮಾ ಬಿಡುಗಡೆ ಮಾಡುವಂತಿಲ್ಲ ಎಂದು ಅಲ್ಲಿನ ಚಿತ್ರಮಂದಿರದ ಮಾಲೀಕರು ಕನ್ನಡ ಚಿತ್ರಗಳನ್ನು ರದ್ದುಗೊಳಿಸಿದ್ದಾರೆ.
ಚೆನ್ನೈ(ಏ.21): ತಮಿಳು ನಟ ಸತ್ಯರಾಜ್ ಕನ್ನಡಿಗರ ವಿರುದ್ಧ ದ್ವೇಷದ ಮಾತುಗಳಿಗೆ ಕ್ಷಮೆ ಕೇಳಿದ ನಂತರ ತಮಿಳುನಾಡಿನ ಚಿತ್ರಮಂದಿರಗಳಲ್ಲೂ ಕನ್ನಡ ಚಿತ್ರಗಳನ್ನು ರದ್ದುಗೊಳಿಸಿದೆ.
ತಮಿಳುನಾಡಿನ ಯಾವ ಚಿತ್ರಮಂದಿರದಲ್ಲೂ ಕನ್ನಡ ಸಿನಿಮಾ ಬಿಡುಗಡೆ ಮಾಡುವಂತಿಲ್ಲ ಎಂದು ಅಲ್ಲಿನ ಚಿತ್ರಮಂದಿರದ ಮಾಲೀಕರು ಕನ್ನಡ ಚಿತ್ರಗಳನ್ನು ರದ್ದುಗೊಳಿಸಿದ್ದಾರೆ. ದರ್ಶನ್ ಅಭಿನಯದ ಚಕ್ರವರ್ತಿ ಹಾಗೂ ಶ್ರೀನಿವಾಸ ಕಲ್ಯಾಣ ಹಾಗೂ ಶುದ್ಧಿ ಚಿತ್ರಗಳ ಪ್ರದರ್ಶನವನ್ನು ರದ್ದುಗೊಳಿಸಿದ್ದಾರೆ. ಮುಂಗಡ ಕಾಯ್ದಿರಿಸಿದ ಟಿಕೆಟ್'ಗಳನ್ನು ಸಹ ರದ್ದುಗೊಳಿಸಲಾಗಿದೆ.
ಈ ಬಗ್ಗೆ ಸುವರ್ಣ ನ್ಯೂಸ್'ನೊಂದಿಗೆ ಮಾತನಾಡಿದ ಕನ್ನಡಪರ ಹೋರಾಟಗಾರ ಸಾ.ರಾ. ಗೋವಿಂದ್ ಅವರು ದ್ವೇಷದ ಕ್ರಮ ಅನುಸರಿಸಿದರೆ ನಾವು ಸಹ ತಮಿಳು ಚಿತ್ರಗಳನ್ನು ಬಂದ್ ಮಾಡುತ್ತೇವೆ'. ಈ ಬಗ್ಗೆ ನಾಳೆ ಕನ್ನಡಪರ ಹೋರಾಟಗಾರರು ಸಭೆ ಸೇರಲಿದ್ದೇವೆ ಎಂದು ತಿಳಿಸಿದ್ದಾರೆ.
