ಹಿರಿಯ ಪೊಲೀಸರು ಸೇರಿದಂತೆ ತಮಿಳುನಾಡಿನ 25ಕ್ಕೂ ಹೆಚ್ಚು ಪೊಲೀಸರು ರೆಸಾರ್ಟ್'ಗೆ ಭೇಟಿ ನೀಡಿ ಪ್ರತಿಯೊಬ್ಬ ಶಾಸಕರನ್ನು ವಿಚಾರಿಸುತ್ತಿದ್ದಾರೆ.

ಕೊಡಗು(ಸೆ.12): ಎಐಎಡಿಎಂಕೆ ಉಚ್ಚಾಟಿತ ನಾಯಕ ಟಿಟಿವಿ ದಿನಕರನ್ ಬೆಂಬಲಿಗ ಶಾಸಕರು ತಂಗಿದ್ದ ಸೋಮವಾರಪೇಟೆಯ 7ನೇ ಹೊಸಕೋಟೆಯ ಪ್ಯಾಡಿಂಗ್ಟ'ನ್ ರೆಸಾರ್ಟ್ ಮೇಲೆ ತಮಿಳುನಾಡು ಪೊಲೀಸರು ದಾಳಿ ನಡೆಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಮ್ಮನ್ನು ಅಪಹರಣ ಮಾಡಿದ್ದಾರೆ ಎಂದು ಇಬ್ಬರು ಶಾಸಕರು ದೂರು ನೀಡಿದ ಹಿನ್ನಲೆಯಲ್ಲಿ ಹಿರಿಯ ಪೊಲೀಸರು ಸೇರಿದಂತೆ ತಮಿಳುನಾಡಿನ 25ಕ್ಕೂ ಹೆಚ್ಚು ಪೊಲೀಸರು ರೆಸಾರ್ಟ್'ಗೆ ಭೇಟಿ ನೀಡಿ ಪ್ರತಿಯೊಬ್ಬ ಶಾಸಕರನ್ನು ವಿಚಾರಿಸುತ್ತಿದ್ದಾರೆ. ನೆರೆಯ ರಾಜ್ಯದ ಪೊಲೀಸರ ದಾಳಿ ಬಗ್ಗೆ ಸ್ಥಳೀಯ ಶುಂಠಿಕೊಪ್ಪ ಪೊಲೀಸರಿಗೆ ಮಾಹಿತಿ ಇಲ್ಲ ಎಂದು ತಿಳಿದು ಬಂದಿದೆ.