ಬೆಂಗಳೂರು(ಅ.2): ಕಾವೇರಿ ವಿಷಯವಾಗಿ ತಮಿಳುನಾಡು ರಾಜಕಾರಣಿಗಳು ಸದಾ ಜಗಳ ತೆಗೆಯುತ್ತಲೆ ಬಂದಿದ್ದಾರೆ. ಜೊತೆಗೆ ನಮ್ಮ ಜನಗಳ ಜೊತೆ ರಾಜಕಾರಣಿಗಳಿಗೂ ತೊಂದರೆ ಕೊಡುತ್ತಿದ್ದಾರೆ. ಈಗ ಪೊಲೀಸರ ಸರದಿ ಶುರುವಾಗಿದೆ. ಕೊಲೆ ಕೇಸಿನ ವಿಚಾರವಾಗಿ ಮಪ್ತಿಯಲ್ಲಿ ತಮಿಳುನಾಡಿಗೆ ಖಾಸಗಿ ವಾಹನದಲ್ಲಿ ತೆರಳುತ್ತಿದ್ದ ಅತ್ತಿಬೆಲೆ ಪಿಎಸ್ಐ ಹಾಗೂ ಸಿಬ್ಬಂದಿಯನ್ನು ತಮಿಳುನಾಡು ಪೊಲೀಸರು ಗಡಿಯಲ್ಲಿ ತಡೆದು ಕ್ಯಾತೆ ತೆಗೆದಿದ್ದಾರೆ. ಅತ್ತಿಬೆಲೆ ಪಿಎಸ್ಐ ಶ್ರೀನಿವಾಸ್ ಐಡಿ ಕಾರ್ಡ್ ತೋರಿಸಿದರೂ ತಮಿಳುನಾಡು ಪೊಲೀಸರು ಗಡಿ ಪ್ರವೇಶಿಸಲು ನಿರಾಕರಿಸಿದ್ದಾರೆ. ಈ ಸಂದರ್ಭದಲ್ಲಿ ಇಬ್ಬರಿಗೂ ಮಾತಿನ ಚಕಮಕಿ ನಡೆದಿದೆ. ಇದೀಗ ಎರಡು ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಗಳು ಸಂಧಾನ ನಡೆಸಿದ್ದಾರೆ.