ಅವರನ್ನು ಶ್ರೀ ರಾಮಚಂದ್ರ ಮೆಡಿಕಲ್ ಆಸ್ಪತ್ರೆಯ ತೀವ್ರಾ ನಿಗಾ ಘಟಕದಲ್ಲಿ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಕಳೆದ ಬುಧವಾರ ಹಿಂದೆ ಆದಾಯ ತೆರಿಗೆ ಅಧಿಕಾರಿಗಳು ಅವರ ಕಛೇರಿ ಹಾಗೂ ನಿವಾಸದ ಮೇಲೆ ದಾಳಿ ನಡೆಸಿದ್ದರು.

ಚೆನ್ನೈ (ಡಿ.24): ತಮಿಳುನಾಡು ಸರ್ಕಾರದ ಮಾಜಿ ಮುಖ್ಯ ಕಾರ್ಯದರ್ಶಿ ಪಿ.ರಾಮಮೋಹನ್ ರಾವ್ ಅವರಿಗೆ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅವರನ್ನು ಶ್ರೀ ರಾಮಚಂದ್ರ ಮೆಡಿಕಲ್ ಆಸ್ಪತ್ರೆಯ ತೀವ್ರಾ ನಿಗಾ ಘಟಕದಲ್ಲಿ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಕಳೆದ ಬುಧವಾರ ಹಿಂದೆ ಆದಾಯ ತೆರಿಗೆ ಅಧಿಕಾರಿಗಳು ಅವರ ಕಛೇರಿ ಹಾಗೂ ನಿವಾಸದ ಮೇಲೆ ದಾಳಿ ನಡೆಸಿದ್ದರು.

ಚೆನ್ನೈನ ಅಣ್ಣಾ ನಗರದಲ್ಲಿರುವ ರಾವ್ ಮನೆ ಮೇಲೆ ಬೆಳಗಿನ ಜಾವ 5:30ರ ವೇಳೆ ಐಟಿ ದಾಳಿ ನಡೆಸಿದ್ದ ಐಟಿ ತಂಡ, ದಾಖಲೆಗಳನ್ನು ಪರಿಶೀಲಿಸಿತ್ತು.

ರಾಮಮೋಹನ್ ಅವರ ಸಂಬಂಧಿಕರ 7 ಮನೆಗಳ ಮೇಲೂ ಐಟಿ ದಾಳಿ ನಡೆಸಲಾಗಿತ್ತು. ಐಟಿ ದಾಳಿಯ ಬಳಿಕ ಅವರನ್ನು ಮುಖ್ಯ ಕಾರ್ಯದರ್ಶಿ ಸ್ಥಾನದಿಂದ ತೆಗೆದುಹಾಕಲಾಗಿತ್ತು.