ದಿ.ಜಯಲಲಿತಾರಿಗೆ ಭಾರತ ರತ್ನ ನೀಡಬೇಕೆಂದು ಕೇಂದ್ರಕ್ಕೆ ಶಿಫಾರಸ್ಸು ಮಾಡಲು ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಸಂಪುಟ ನಿರ್ಣಯ ಅಂಗೀಕರಿಸಿದೆ.
ಚೆನ್ನೈ (ಡಿ.10): ದಿ.ಜಯಲಲಿತಾರಿಗೆ ಭಾರತ ರತ್ನ ನೀಡಬೇಕೆಂದು ಕೇಂದ್ರಕ್ಕೆ ಶಿಫಾರಸ್ಸು ಮಾಡಲು ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಸಂಪುಟ ನಿರ್ಣಯ ಅಂಗೀಕರಿಸಿದೆ.
ಎಂಜಿಆರ್ ಸ್ಮಾರಕವನ್ನು 'ಭಾರತ ರತ್ನ ಡಾ.ಎಂಜಿಆರ್ ಮತ್ತು ಜಯಲಲಿತಾ ಸ್ಮಾರಕ' ಎಂದು ಮರುನಾಮಕರಣ ಮಾಡಲು ಸರ್ಕಾರ ನಿರ್ಧರಿಸಿದೆ. ಇದರ ಜೊತೆಗೆ ಸಂಸತ್ ಆವರಣದ ಒಳಗೆ ಜಯಲಲಿತಾರ ಕಂಚಿನ ಪ್ರತಿಮೆ ಸ್ಥಾಪಿಸಬೇಕೆಂದು
ಕೇಂದ್ರಕ್ಕೆ ಕೇಳಿದೆ.
ಜಯಲಲಿತಾ ಹೆಸರಿನಲ್ಲಿ 15 ಕೋಟಿ ವೆಚ್ಚದಲ್ಲಿ ಸ್ಮಾರಕ ನಿರ್ಮಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ.
