‘ಸಶಸ್ತ್ರ ಪಡೆಗಳು ಮೋದಿ- ಶಾ ಅಥವಾ ಬಿಜೆಪಿಗೆ ಸೇರಿದ್ದಲ್ಲ’|ಸಶಸ್ತ್ರ ಪಡೆಗಳು ಭಾರತಕ್ಕೆ ಸೇರಿದವು ಎಂದ ಟಿಎಂಸಿ ಮುಖಂಡ| ಮೋದಿ-ಶಾ ವಿರುದ್ಧ ಡೆರೆಕ್ ಒ ಬ್ರೇಯಿನ್ ವಾಗ್ದಾಳಿ| ‘ಹುತಾತ್ಮ ಯೋಧರ ವಿಚಾರವನ್ನು ರಾಜಕೀಯಗೊಳಿಸಲು ಇಷ್ಟಪಡುವುದಿಲ್ಲ’|

ಕೊಲ್ಕತ್ತಾ(ಮಾ.03): ಸಶಸ್ತ್ರ ಪಡೆಗಳು ಮೋದಿ- ಶಾ ಅಥವಾ ಬಿಜೆಪಿಗೆ ಸೇರಿದ್ದಲ್ಲ, ಭಾರತಕ್ಕೆ ಸೇರಿದವು ಎಂದು ತೃಣಮೂಲ ಕಾಂಗ್ರೆಸ್ ಮುಖಂಡ ಡೆರೆಕ್ ಒ ಬ್ರೇಯಿನ್ ವಾಗ್ದಾಳಿ ನಡೆಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
Scroll to load tweet…

ವೋಟ್ ಬ್ಯಾಂಕ್ ರಾಜಕಾರಣದಿಂದ ಬಿಜೆಪಿ ನಾಯಕರು ಹಾಗೂ ಅಮಿತ್ ಶಾ, ವಿಭಜನೆ ಹಾಗೂ ದ್ವೇಷ ಪೂರಿತ ಮಾತುಗಳನ್ನಾಡುತ್ತಿದ್ದಾರೆ. ಸಶಸ್ತ್ರ ಪಡೆಗಳು ಮೋದಿ, ಅಮಿತ್ ಶಾ- ಬಿಜೆಪಿಗೆ ಸೇರಿಲ್ಲ, ಅವುಗಳು ಭಾರತ ದೇಶಕ್ಕೆ ಸೇರಿದವು ಎಂದು ಡೆರೆಕ್ ಒ ಬ್ರೇಯಿನ್ ಟ್ವೀಟ್ ಮಾಡಿದ್ದಾರೆ.

Scroll to load tweet…

ಸೇನಾಪಡೆಗಳ ಮೇಲೆ ಅತ್ಯಂತ ಗೌರವವಿದೆ. ಹುತಾತ್ಮ ಯೋಧರ ವಿಚಾರವನ್ನು ರಾಜಕೀಯಗೊಳಿಸಲು ಇಷ್ಟಪಡುವುದಿಲ್ಲ ಎಂದು ಮಮತಾ ಬ್ಯಾನರ್ಜಿ ಇತ್ತೀಚಿಗೆ ಹೇಳಿಕೆ ನೀಡಿದ್ದರು.