ಕಿಡ್ನಾಪ್ ಆಗಿದ್ದ ಐಟಿ ಅಧಿಕಾರಿ ಪುತ್ರ ಶರತ್ ಕೊಲೆ ಕೇಸ್'ಗೆ ಮಹತ್ವದ ಟ್ವಿಸ್ಟ್ ಸಿಕ್ಕಿದೆ. ಕಿಡ್ನ್ಯಾಪ್ ಆದ 8 ದಿನಗಳ ಬಳಿಕ ಶರತ್ ಶವವಾಗಿ ಪತ್ತೆಯಾಗಿದ್ದಾನೆ. ಶರತ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇದೀಗ ರೋಪಿಗಳನ್ನು ಬಂಧಿಸಿದ್ದು, ಆರೋಪಿಗಳು ಶರತ್'ಗೆ ಸಂಬಂಧಿಸಿದಂತೆ ಶಾಕಿಂಗ್ ವಿಚಾರವನ್ನು ಬಾಯ್ಬಿಟ್ಟಿದ್ದಾರೆ.
ಬೆಂಗಳೂರು(ಸೆ.22): ಕಿಡ್ನಾಪ್ ಆಗಿದ್ದ ಐಟಿ ಅಧಿಕಾರಿ ಪುತ್ರ ಶರತ್ ಕೊಲೆ ಕೇಸ್'ಗೆ ಮಹತ್ವದ ಟ್ವಿಸ್ಟ್ ಸಿಕ್ಕಿದೆ. ಕಿಡ್ನ್ಯಾಪ್ ಆದ 8 ದಿನಗಳ ಬಳಿಕ ಶರತ್ ಶವವಾಗಿ ಪತ್ತೆಯಾಗಿದ್ದಾನೆ. ಶರತ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇದೀಗ ರೋಪಿಗಳನ್ನು ಬಂಧಿಸಿದ್ದು, ಆರೋಪಿಗಳು ಶರತ್'ಗೆ ಸಂಬಂಧಿಸಿದಂತೆ ಶಾಕಿಂಗ್ ವಿಚಾರವನ್ನು ಬಾಯ್ಬಿಟ್ಟಿದ್ದಾರೆ.
ಆರೋಪಿಗಳ ವಿಚಾರಣೆ ನಡೆಸಿದ ಪೊಲೀಸರಿಗೆ ಅಕ್ಕನ ಪ್ರಿಯಕರ ವಿಶಾಲ್ ಕಿಡ್ನಾಪ್ ಮಾಡಿ ಕೊಲೆ ಮಾಡಿದ್ದಾನೆ ಎನ್ನುವ ಮಾಹಿತಿ ಸಿಕ್ಕಿದೆ. ಇನ್ನು ಶರತ್ ಸಹ ಆರೋಪಿ ವಿಶಾಲ್'ನ ತಂಗಿಯನ್ನು ಪ್ರೀತಿಸುತ್ತಿದ್ದ ವಿಷಯ ಈಗ ಬಯಲಾಗಿದೆ. ತನ್ನ ತಂಗಿಯನ್ನು ಶರತ್ ಪ್ರೀತಿಸುತ್ತಿದ್ದ ವಿಚಾರ ತಿಳಿದು ಶರತ್ನನ್ನ ವಿಶಾಲ್ & ಗ್ಯಾಂಗ್ ಕಿಡ್ನ್ಯಾಪ್ ಮಾಡಿದೆ. ಈ ಭಯಾನಕ ಸತ್ಯವನ್ನ ಪೊಲೀಸರ ಮುಂದೆ ಆರೋಪಿಗಳು ಬಾಯ್ಬಿಟ್ಟಿದ್ದಾರೆ. ಶಿವಮೊಗ್ಗದಲ್ಲಿ ತಲೆಮರೆಸಿಕೊಂಡಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಶರತ್'ನನ್ನು ಕಿಡ್ನಾಪ್ ಮಾಡಿಕೊಂದು ಮೊದಲು ಶವವನ್ನು ರಾಮೋಹಳ್ಳಿ ಕೆರೆಗೆ ಎಸೆದಿದ್ದರು. ನಂತರ ಶರತ್ ಮೃತದೇಹವನ್ನು ಬೇರೆಡೆ ಹೂತಿಟ್ಟಿದ್ದರು.
2ನೇ ವರ್ಷದ ಡಿಪ್ಲೋಮಾ ಓದುತ್ತಿದ್ದ ಐಟಿ ಪುತ್ರ ಶರತ್ ಅಧಿಕಾರಿ ನಿರಂಜನ್ ಪುತ್ರ ಶರತ್ ಸೆಪ್ಟೆಂಬರ್ 14ರಂದು ಸಂಜೆ 5.30ಕ್ಕೆ ಮನೆ ಬಿಟ್ಟಿದ್ದ ಹೊಸ ಬೈಕ್ ತೆಗೆದುಕೊಂಡು ಸ್ನೇಹಿತರಿಗೆ ಸ್ವೀಟ್ ಕೊಡುವುದಾಗಿ ಮನೆಯಿಂದ ಹೊರಟಿದ್ದ. ಬಳಿಕ ಮನೆಗೆ ಫೋನ್ ಮಾಡಿ ತಡವಾಗಿ ಬರ್ತಿನಿ ಎಂದು ತಿಳಿಸಿದ್ದ. ಆದರೆ ಮನೆ ಬಿಟ್ಟ ದಿನ ರಾತ್ರಿ 8.30 ಆದರೂ ವಾಪಸ್ ಬಂದಿರಲಿಲ್ಲ. ಇದಾದ ಬಳಿಕ ಸುಮಾರು ರಾತ್ರಿ 10 ಗಂಟೆಗೆ ಪೋಷಕರು ಶರತ್‌ಗೆ ಕರೆ ಮಾಡಿದ್ದು, ಆತ ಕರೆಯನ್ನು ಸ್ವೀಕರಿಸಿರಲಿಲ್ಲ. ರಾತ್ರಿ 10:30ಕ್ಕೆ ಶರತ್ ಮೊಬೈಲ್'ನಿಂದಲೇ ಮೂವರು ಕಿಡ್ನಾಪ್ ಮಾಡಿದ್ದು, 50 ಲಕ್ಷ ನೀಡಿ, ನನ್ನನ್ನು ಉಳಿಸಿಕೊಳ್ಳಿ ಎಂದು ಮನವಿ ಮಾಡಿಕೊಳ್ಳುವ ವಾಟ್ಸ್ಌಪ್ ವಿಡಿಯೋ ಅಕ್ಕ, ತಾಯಿ & ತಂದೆ ಮೊಬೈಲ್'ಗೆ ಕಳುಹಿಸಿದ್ದ
ಇದರಿಂದ ಹುಡುಕಾಟ ನಡೆಸಿದ್ದ ಪೊಲೀಸರಿಗೆ ಕೊನೆಯದಾಗಿ ಶರತ್ ಮೊಬೈಲ್ ಲೊಕೇಷನ್ ಮೈಸೂರು ರಸ್ತೆಯಲ್ಲಿ ಸಿಕ್ಕಿತ್ತು. ಆರೋಪಿಗಳ ಬಂಧನಕ್ಕೆ ನಾಲ್ಕು ತಂಡ ರಚಿಸಿದ್ರೂ ಪ್ರಯೋಜನವಾಗಲಿಲ್ಲ. ಹೀಗಾಗಿ ಮೃತ ಶರತ್ ಮೇಲೆಯೇ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದರು. ಆದರೆ 8 ದಿನಗಳ ಬಳಿಕ ಐಟಿ ಅಧಿಕಾರಿ ಪುತ್ರ ಶರತ್ ಶವವಾಗಿ ಪತ್ತೆಯಾಗಿದ್ದಾನೆ. ಇದೀಗ ರೋಪಿಗಳನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ಸಂದರ್ಭದಲ್ಲಿ ಪ್ರೀತಿಉ ವಿಚಾರ ಬಯಲಾಗಿದೆ.
