ಟಿಪ್ಪು ಜಯಂತಿ ವೇಳೆ ಬಾಲ ಬಿಚ್ಚಿದ್ರೆ ನಿರ್ದಾಕ್ಷಿಣ್ಯ ಕ್ರಮ

ಟಿಪ್ಪು ಜಯಂತಿ ವಿವಾದವಾಗಿಯೇ ಪ್ರತಿ ವರ್ಷ ಮಾರ್ಪಾಡಾಗುತ್ತಿದೆ. ಕೊಡಗಿನಲ್ಲಿ ಈ ಬಾರಿ ಸಹ ಟಿಪ್ಪು ಜಯಂತಿಗೆ ವಿರೋಧ ವ್ಯಕ್ತವಾಗಿದ್ದು ನವೆಂಬರ್ 10 ರಂದು ಬಂದ್ ಗೆ ಕರೆ ಕೊಡಲಾಗಿದೆ.

Tipu Jayanti: Dawn To Dusk Bandh In Kodagu On November 10

ಮಡಿಕೇರಿ[ನ.07] ರಾಜ್ಯ ಸರ್ಕಾರ ನವೆಂಬರ್ 10ಕ್ಕೆ ಹಮ್ಮಿಕೊಂಡಿರುವ ಟಿಪ್ಪು ಜಯಂತಿಗೆ ಕೊಡಗು ಜಿಲ್ಲೆಯಲ್ಲಿ ವಿರೋಧ ವ್ಯಕ್ತವಾಗಿದ್ದು, ಅದೇ ದಿನ ಟಿಪ್ಪು ಜಯಂತಿ ವಿರೋಧಿ ಹೋರಾಟ ಸಮಿತಿ ಕೊಡಗು ಬಂದ್‍ಗೆ ಕರೆ ನೀಡಿದೆ.

ಸರ್ಕಾರ ಆಯೋಜಿಸುತ್ತಿರುವ ಟಿಪ್ಪು ಜಯಂತಿಯನ್ನು ಖಂಡಿಸಿ ಕೊಡಗು ಬಂದ್‍ಗೆ ಕರೆ ನೀಡುವುದಾಗಿ ಸೋಮವಾರಪೇಟೆಯಲ್ಲಿ ಟಿಪ್ಪು ಜಯಂತಿ ವಿರೋಧಿ ಸಮಿತಿ ಸ್ಪಷ್ಟನೆ ನೀಡಿದೆ.

ಜಿಲ್ಲಾ ಉಸ್ತುವಾರಿ ಹಾಗೂ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್, ಟಿಪ್ಪು ಜಯಂತಿಯ ಬಗ್ಗೆ ನಾನೊಬ್ಬನೇ ತೀರ್ಮಾನ ತೆಗೆದುಕೊಳ್ಳಲು ಬರುವುದಿಲ್ಲ. ಇದು ರಾಜ್ಯ ಸರ್ಕಾರದ ಕಾರ್ಯಕ್ರಮ. ಯಾರ ಮನಸ್ಸಿಗೂ ನೋವಾಗದಂತೆ ನಡೆದುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ಈ ಬಗ್ಗೆ ದಕ್ಷಿಣ ವಿಭಾಗದ  ಐಜಿ ಶರತ್ಚಂದ್ರ ಮಾತನಾಡಿ, ಜಯಂತಿಗೆ ಯಾರೂ ಅಡ್ಡಿಪಡಿಸುವಂತಿಲ್ಲ. ಶಾಂತಿ ಕದಡುವ ಯತ್ನ ಮಾಡಿದರೆ ಅಂತಹವ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕಾಗುತ್ತದೆ. ಸೂಕ್ತ ಭದ್ರತೆಗೆ ಸಕಲ ಮುಂಜಾಗ್ರತಾ ಕ್ರಮ ತೆಗೆದುಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios