ಬಳಿಕ ಬೆಳಗ್ಗೆ 10.30ಕ್ಕೆ ಟೌನ್‌'ಹಾಲ್‌ ಮುಂಭಾಗದ ಡಾ.ಬಿ.ಆರ್‌. ಅಂಬೇ ಡ್ಕರ್‌ ಪ್ರತಿಮೆ ಬಳಿ ಮಾಜಿ ಸಚಿವೆ ಬಿ.ಟಿ. ಲಲಿತಾ ನಾಯ್ಕ ಅವರು ಟಿಪ್ಪು ರಾರ‍ಯಲಿಗೆ ಚಾಲನೆ ನೀಡಲಿದ್ದು, ಮಧ್ಯಾಹ್ನ 12.30ಕ್ಕೆ ದಸರಾ ವಸ್ತು ಪ್ರದರ್ಶನ ಮೈದಾನದಲ್ಲಿ ನಡೆಯುವ ಬೃಹತ್ ಬಹಿರಂಗ ಸಮಾವೇಶದಲ್ಲಿ ಬೇಲಿಮಠದ ಶಿವಾನುಭವ ಚರಮೂರ್ತಿ ಶಿವರುದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ನಾಡಿನ ಹಿರಿಯ ಚಿಂತಕ ಎ.ಕೆ. ಸುಬ್ಬಯ್ಯ ಅಧ್ಯಕ್ಷತೆ ವಹಿಸುವರು.

ಮೈಸೂರು (ಮೇ.03): ಕರ್ನಾಟಕ ಕೋಮು ಸೌಹಾರ್ದ ವೇದಿಕೆ ಮತ್ತು ಮೈಸೂರು ಪ್ರಗತಿಪರ ಸಂಘಟನೆ ಗಳ ವತಿಯಿಂದ ಮೇ 4 ರಂದು ನಗರದ ದಸರಾ ವಸ್ತುಪ್ರದರ್ಶನ ಆವರಣದಲ್ಲಿ ಟಿಪ್ಪು ಸುಲ್ತಾನ್‌ ನೆನಪಿನ ಬೃಹತ್‌ ಸಮಾ ವೇಶ ಹಮ್ಮಿಕೊಳ್ಳಲಾಗಿದೆ ಎಂದು ಸೌಹಾ ರ್ದ ವೇದಿಕೆಯ ಪ್ರಧಾನ ಕಾರ್ಯದರ್ಶಿ ಕೆ.ಎಲ್. ಅಶೋಕ್‌ ಹೇಳಿದರು.

ಅಂದು ಬೆಳಗ್ಗೆ 9.30ಕ್ಕೆ ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌. ದೊರೆ ಸ್ವಾಮಿ ಅವರು ಶ್ರೀರಂಗಪಟ್ಟಣದ ಟಿಪ್ಪು ಹುತಾತ್ಮ ಸ್ಥಳದಲ್ಲಿ ಸಾಂಕೇತಿಕವಾಗಿ ಉದ್ಘಾಟಿಸಲಿದ್ದು, ಮೇಲುಕೋಟೆ ಶಾಸಕ ಕೆ.ಎಸ್‌. ಪುಟ್ಟಣ್ಣಯ್ಯ ಅಧ್ಯಕ್ಷತೆ ವಹಿಸು ವರು. ದಲಿತ ಸಂಘರ್ಷ ಸಮಿತಿಯ ಹಿರಿಯ ಮುಖಂಡ ಗುರುಪ್ರಸಾದ್‌ ಕೆರೆ ಗೋಡು, ಭಾರತೀಯ ಕಮ್ಯುನಿಸ್ಟ್‌ ಪಕ್ಷದ ಮುಖಂಡ ರಾಧಾ ಸುಂದರೇಶ್‌ ಮತ್ತು ಡಾ. ಸುಜಯ… ಪಾಲ್ಗೊಳ್ಳಲಿದ್ದಾರೆ ಎಂದು ಅವರು ಮಂಗಳವಾ ಸುದ್ದಿಗೋಷ್ಠಿ ಯಲ್ಲಿ ತಿಳಿಸಿದರು.

ಬಳಿಕ ಬೆಳಗ್ಗೆ 10.30ಕ್ಕೆ ಟೌನ್‌ಹಾಲ್‌ ಮುಂಭಾಗದ ಡಾ.ಬಿ.ಆರ್‌. ಅಂಬೇ ಡ್ಕರ್‌ ಪ್ರತಿಮೆ ಬಳಿ ಮಾಜಿ ಸಚಿವೆ ಬಿ.ಟಿ. ಲಲಿತಾ ನಾಯ್ಕ ಅವರು ಟಿಪ್ಪು ರಾರ‍ಯಲಿಗೆ ಚಾಲನೆ ನೀಡಲಿದ್ದು, ಮಧ್ಯಾಹ್ನ 12.30ಕ್ಕೆ ದಸರಾ ವಸ್ತು ಪ್ರದರ್ಶನ ಮೈದಾನದಲ್ಲಿ ನಡೆಯುವ ಬೃಹತ್ ಬಹಿರಂಗ ಸಮಾವೇಶದಲ್ಲಿ ಬೇಲಿಮಠದ ಶಿವಾನುಭವ ಚರಮೂರ್ತಿ ಶಿವರುದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ನಾಡಿನ ಹಿರಿಯ ಚಿಂತಕ ಎ.ಕೆ. ಸುಬ್ಬಯ್ಯ ಅಧ್ಯಕ್ಷತೆ ವಹಿಸುವರು.

ಮುಖ್ಯ ಅತಿಥಿಗಳಾಗಿ ಸಾಹಿತಿ ದೇವನೂರ ಮಹಾದೇವ, ಬೆಟ್ಟಯ್ಯ ಕೋಟೆ, ಪ್ರೊ. ಕಾಳೇಗೌಡ ನಾಗ ವಾರ, ಪತ್ರಕರ್ತೆ ಗೌರಿ ಲಂಕೇಶ್‌, ಕನ್ನಡ ಪುಸ್ತಕ ಪ್ರಾಧಿಕಾರದ ಡಾ. ಬಂಜಗೆರೆ ಜ ಯಪ್ರಕಾಶ್‌, ಸಮಾಜವಾದಿ ಚಿಂತಕ ಪ. ಮಲ್ಲೇಶ್‌ ಭಾಗವಹಿಸುವರು ಎಂದರು.

ವಿಚಾರಗೋಷ್ಠಿ: ಮಧ್ಯಾಹ್ನ 2.30ಕ್ಕೆ ‘ಭಾರತದ ಸ್ವಾತಂತ್ರ್ಯ ಸಂಗ್ರಾಮ, ಆಧುನಿಕ ಕರ್ನಾಟಕದ ನಿರ್ಮಾಣ ಮತ್ತು ಟಿಪ್ಪು ಸ್ತುಲಾನ…' ಮತ್ತು ಮಧ್ಯಾಹ್ನ 3.30 ಕ್ಕೆ ‘ಶೂದ್ರ, ದಲಿತ ಮತ್ತು ಹಿಂದುಳಿದ ವರ್ಗಗಳ ಸಬಲೀಕರಣಕ್ಕೆ ಟಿಪ್ಪು ಕೊಡುಗೆ' ಎಂಬ ವಿಷಯಗಳ ವಿಚಾರ ಗೋಷ್ಠಿ ಇರುತ್ತದೆ. ಸಂಜೆ 4.30ಕ್ಕೆ ನಡೆಯುವ ಸಮಾರೋಪ ಸಮಾರಂಭ ದಲ್ಲಿ ಕನ್ನಡ ಹೋರಾಟಗಾರ ವಾಟಾಳ್‌ ನಾಗರಾಜ ಅವರು ಸಮಾರೋಪ ಭಾಷಣ ಮಾಡಲಿದ್ದಾರೆ. ಚಿಂತಕ ಪ. ಮಲ್ಲೇಶ್‌ ಅಧ್ಯಕ್ಷತೆ ವಹಿಸುವರು.

ಟಿಪ್ಪು ಸುಲ್ತಾನ್‌ ಕುರಿತು ಚಿತ್ರ ಪ್ರದರ್ಶನ, ಸೌಹಾರ್ದ ಕಲಾತಂಡದಿಂದ ಟಿಪ್ಪು ಲಾವಣಿಗಳ ಗಾಯನ, ಜಾನಪದ ಕಲಾತಂಡ ಗಳಿಂದ ಕಲಾ ಪ್ರದರ್ಶನ ನಡೆಯಲಿದೆ ಎಂದು ಅಶೋಕ್‌ ತಿಳಿಸಿದರು. ಟಿಪ್ಪು ಒಬ್ಬ ಅಪ್ರತಿಮ ದೇಶ ಭಕ್ತ ಸ್ವಾತಂತ್ರ್ಯ ಸೇನಾನಿಯಾಗಿದ್ದು ಮಹಿಳೆ ಯರು ಸೇರಿದಂತೆ ಹಿಂದುಳಿದವರನ್ನು ಮುಖ್ಯವಾಹಿನಿಗೆ ತರಲು ನೂತನ ಮಾದರಿಯ ಅಧಿಕಾರ ನೀತಿಯನ್ನು ರಚಿಸಿದ್ದರು. ಆದರೆ ಪ್ರಸ್ತುತ ಸಮಾಜದಲ್ಲಿ ಇತಿಹಾಸ ವನ್ನು ತಿರುಚುವ ಕೆಲಸವಾಗುತ್ತಿರುವುದು ಶೋಚನೀಯ. ಆದ್ದರಿಂದ ವಾಸ್ತವಿಕ ನೆಲೆಗಟ್ಟಿನಲ್ಲಿ ಇತಿಹಾಸವನ್ನು ಮನವರಿಕೆ ಮಾಡಿಕೊಡುವ ಉದ್ದೇಶದಿಂದ ಈ ಸಮಾವೇಶ ನಡೆಸಲಾಗುತ್ತಿದೆ ಎಂದರು.

ದಸಂಸ ಸಂಚಾಲಕ ಬೆಟ್ಟಯ್ಯ ಕೋಟೆ, ಪ್ರೊ. ಕಾಳೇಗೌಡ ನಾಗವಾರ, ಜಿಲ್ಲಾ ಸಂಚಾಲಕ ಶಿವಕುಮಾರ್‌ ಅಲಗೂಡು, ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ರಾಜ್ಯಾಧ್ಯಕ್ಷ ಕೆ.ಎಸ್‌. ಶಿವರಾಂ, ಜಮಾಅತೆ ಇಸ್ಲಾಮಿ ಹಿಂದ್‌ ಸಂಚಾಲಕ ಅಸಾದುಲ್ಲಾ ಶೇಖ್‌ ಇದ್ದರು.