ತುಮಕೂರು(ನ.07): ಟಿಪ್ಪು ದಿನಾಚರಣೆ ವಿರೋಧಿಸಿ ತುಮಕೂರಿನಲ್ಲಿ ಟಿಪ್ಪು ದಿನಾಚರಣೆ ವಿರೋಧಿ ವೇದಿಕೆಯಿಂದ ಪ್ರತಿಭಟನೆ ನಡೆಯಿತು. ಜಿಲ್ಲಾಧಿಕಾರಿ ಕಚೇರಿ ಎದುರು ಸೇರಿದ ಪ್ರತಿಭಟನಾಕಾರರು ಟಿಪ್ಪು ವಿರುದ್ದ ಘೋಷಣೆ ಕೂಗಿದರು. ಟಿಪ್ಪು ಹಿಂದೂ ವಿರೋಧಿಯಾಗಿದ್ದ, ಆತ ಸ್ವಾತಂತ್ರ್ಯ ಹೋರಾಟಗಾರನಲ್ಲ  ಅಂತಹ ಹಿಂದೂ ವಿರೋಧಿ ಟಿಪ್ಪುವಿನ  ದಿನಾಚರಣೆ ಮಾಡಬಾರದು ಎಂದು ಸರ್ಕಾರಕ್ಕೆ ಆಗ್ರಹಿಸಿದರು.

ಟಿಪ್ಪು ಮೈಸೂರಿನ ಹುಲಿಯ ಅಲ್ಲ, ಆತ ಮೈಸೂರಿನ ನರಿ ಎಂದು ಸಂಬೋಧಿಸಿದ್ದರು. ನವೆಂಬರ್ 10 ರಂದು ನಡೆಯುವ ದಿನಾಚರಣೆಯನ್ನು ರದ್ದು  ಮಾಡಬೇಕು ಎಂದು ಪ್ರತಿಭಟನಾಕರರು ಆಗ್ರಹಿಸಿದ್ದರು. ಕೆಲ ಮುಸ್ಲಿಂ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.