‘ರಿಪಬ್ಲಿಕ್‌ ಟೀವಿ' ಇಂಗ್ಲಿಷ್‌ ಸುದ್ದಿವಾಹಿನಿ ಸ್ಥಾಪಿಸಹೊರಟಿರುವ ಪತ್ರಕರ್ತ ಅರ್ನಬ್‌ ಗೋಸ್ವಾಮಿ ಅವರು ‘ಟೈಮ್ಸ್‌ ನೌ' ಸುದ್ದಿವಾಹಿನಿಯ ಮುಖ್ಯ ಸಂಪಾದಕರಾಗಿದ್ದಾಗ ‘ನೇಶನ್‌ ವಾಂಟ್ಸ್‌ ಟು ನೋ' (ದೇಶ ಕೇಳಬಯಸುತ್ತದೆ..) ಎಂದು ಚರ್ಚೆಯ ಸಂದರ್ಭಗಳಲ್ಲಿ ಹೇಳುವುದು ಜನಪ್ರಿಯವಾಗಿತ್ತು. ‘ಆದರೆ ಈಗ ಕೃತಿಸ್ವಾಮ್ಯ ಕಾನೂನಿನಡಿ ಈ ವಾಕ್ಯ ಬಳಸದಂತೆ ಮಾಧ್ಯಮ ಸಂಸ್ಥೆಯೊಂದು ತಮಗೆ ಲೀಗಲ್‌ ನೋಟಿಸ್‌ ಜಾರಿ ಮಾಡಿದೆ' ಎಂದು ಖುದ್ದು ಅರ್ನಬ್‌ ಹೇಳಿದ್ದಾರೆ.

ಮುಂಬೈ(ಎ.18): ‘ರಿಪಬ್ಲಿಕ್‌ ಟೀವಿ' ಇಂಗ್ಲಿಷ್‌ ಸುದ್ದಿವಾಹಿನಿ ಸ್ಥಾಪಿಸಹೊರಟಿರುವ ಪತ್ರಕರ್ತ ಅರ್ನಬ್‌ ಗೋಸ್ವಾಮಿ ಅವರು ‘ಟೈಮ್ಸ್‌ ನೌ' ಸುದ್ದಿವಾಹಿನಿಯ ಮುಖ್ಯ ಸಂಪಾದಕರಾಗಿದ್ದಾಗ ‘ನೇಶನ್‌ ವಾಂಟ್ಸ್‌ ಟು ನೋ' (ದೇಶ ಕೇಳಬಯಸುತ್ತದೆ..) ಎಂದು ಚರ್ಚೆಯ ಸಂದರ್ಭಗಳಲ್ಲಿ ಹೇಳುವುದು ಜನಪ್ರಿಯವಾಗಿತ್ತು. ‘ಆದರೆ ಈಗ ಕೃತಿಸ್ವಾಮ್ಯ ಕಾನೂನಿನಡಿ ಈ ವಾಕ್ಯ ಬಳಸದಂತೆ ಮಾಧ್ಯಮ ಸಂಸ್ಥೆಯೊಂದು ತಮಗೆ ಲೀಗಲ್‌ ನೋಟಿಸ್‌ ಜಾರಿ ಮಾಡಿದೆ' ಎಂದು ಖುದ್ದು ಅರ್ನಬ್‌ ಹೇಳಿದ್ದಾರೆ.

 ಈ ಬಗ್ಗೆ ವಿಡಿಯೋ ಬಿಡುಗಡೆ ಮಾಡಿರುವ ಅವರು, ‘ನನಗೆ ಲೀಗಲ್‌ ನೋಟಿಸ್‌ ಬಂದಿದ್ದರೂ ಈ ವಾಕ್ಯವನ್ನು ಬಳಸುವುದರಿಂದ ತಡೆಯಲು ಯಾರಿಂದಲೂ ಆಗದು. ಸ್ಟುಡಿಯೋದಲ್ಲೇ ಇರುತ್ತೇನೆ. ಬೇಕಿದ್ದರೆ ನನ್ನನ್ನು ಬಂಧಿಸಿ' ಎಂದು ಸವಾಲೆಸೆದಿದ್ದಾರೆ.

ಎರಡು ವಾಹಿನಿಗಳ ಈ ಶೀತಲ ಸಮರದ ಮಧ್ಯೆ ಪ್ರೇಕ್ಷಕರಲ್ಲಿ ನಡುವೆಯೂ ಚರ್ಚೆಗಳು ಪ್ರಾರಂಭವಾಗಿವೆ. ಒಂದು ತಂಡ ಈ ವಾಕ್ಯವನ್ನು ಬಳಸಿ ಇದನ್ನು ಜನಪ್ರಿಯಗೊಳಿಸಿದ ಅರ್ನಬ್ ಪರವಾಗಿ ಮಾತನಾಡುತ್ತಿದ್ದರೆ, ಮತ್ತೆ ಕೆಲವರು ಇದನ್ನು ಬಳಸುವ ಹಕ್ಕು ಕೇವಲ ವಾಹಿನಿಗಷ್ಟೇ ಇದೆ ಎನ್ನುತ್ತಿದ್ದಾರೆ.