ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ ಮತ್ತು ಚರ್ಚ್‌'ಸ್ಟ್ರೀಟ್‌'ಗಳಲ್ಲಿ ವಿಶೇಷ ಆದ್ಯತೆ ಮೇರೆಗೆ ಸುಮಾರು 30-40 ಮೀಟರ್ ಸುತ್ತಳತೆಯಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದ್ದು, ವಿಶೇಷವಾಗಿ ಅಧಿಕ ವಿದ್ಯುತ್ ದೀಪಗಳ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ, ಒಂದು ಸಾವಿರ ಸಿವಿಲ್ ಡೆಫೆನ್ಸ್ ಸಿಬ್ಬಂದಿ ಕೂಡ ಭದ್ರತೆ ಒದಗಿಸಲಿದ್ದಾರೆ. 500 ಹೊಯ್ಸಳ ವಾಹನ ಗಸ್ತು, 250 ದ್ವಿಚಕ್ರ ಚಿತಾ ವಾಹನಗಳು ಗಸ್ತು ತಿರಗಲಿವೆ.

ಬೆಂಗಳೂರು(ಡಿ.31): ಕಳೆದ ವರ್ಷ ಹೊಸ ವರ್ಷಾಚರಣೆ ಸಂದರ್ಭದಲ್ಲಿ ನಡೆದ ಅಹಿತಕರ ಘಟನೆಗಳ ಹಿನ್ನೆಲೆಯಲ್ಲಿ ಇಡೀ ರಾಜಧಾನಿಯಾದ್ಯಂತ ಭಾರೀ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಸಂಭ್ರದ ಮೇಲೇ ಕಣ್ಣಿಡಲು ಎಂ.ಜಿ. ರಸ್ತೆ ಮತ್ತು ಬ್ರಿಗೇಡ್ ರಸ್ತೆಗಳಲ್ಲಿ 20 ಡ್ರೋಣ್ ಕ್ಯಾಮೆರಾಗಳ ಬಳಕೆ ಮಾಡಲಾಗುತ್ತಿದೆ. ಈ ಮೂಲಕ ದುಷ್ಕರ್ಮಿಗಳು ಮತ್ತು ಅನುಮಾನಾಸ್ಪ ವ್ಯಕ್ತಿಗಳ ಬಗ್ಗೆ ತೀವ್ರ ನಿಗಾವಹಿಸಲಾಗಿದೆ. ಪ್ರತಿ ಹಂತವನ್ನು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿರುವ ಕಮಾಂಡೋ ಸೆಂಟರ್‌'ನಲ್ಲಿ ಡಿಸಿಪಿ ದರ್ಜೆಯ ಅಧಿಕಾರಿಗಳು ಖುದ್ದು ವೀಕ್ಷಣೆ ಮಾಡಲಿದ್ದಾರೆ.

ನಗರಾದ್ಯಂತ 15 ಸಾವಿರ ಮಂದಿ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದ್ದು, ಈ ಪೈಕಿ ಎಂ.ಜಿ.ರಸ್ತೆ ಮತ್ತು ಬ್ರಿಗೇಡ್ ರಸ್ತೆಯಲ್ಲಿ 500ಕ್ಕೂ ಅಧಿಕ ಮಹಿಳಾ ಸಿಬ್ಬಂದಿ ಸೇರಿದಂತೆ ಎರಡೂವರೆ ಸಾವಿರ ಸಿಬ್ಬಂದಿ ಭದ್ರತಾ ಕಾರ್ಯ ನಿರ್ವಹಿಸಲಿದ್ದಾರೆ. ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ ಮತ್ತು ಚರ್ಚ್‌'ಸ್ಟ್ರೀಟ್‌'ಗಳಲ್ಲಿ ವಿಶೇಷ ಆದ್ಯತೆ ಮೇರೆಗೆ ಸುಮಾರು 30-40 ಮೀಟರ್ ಸುತ್ತಳತೆಯಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದ್ದು, ವಿಶೇಷವಾಗಿ ಅಧಿಕ ವಿದ್ಯುತ್ ದೀಪಗಳ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ, ಒಂದು ಸಾವಿರ ಸಿವಿಲ್ ಡೆಫೆನ್ಸ್ ಸಿಬ್ಬಂದಿ ಕೂಡ ಭದ್ರತೆ ಒದಗಿಸಲಿದ್ದಾರೆ. 500 ಹೊಯ್ಸಳ ವಾಹನ ಗಸ್ತು, 250 ದ್ವಿಚಕ್ರ ಚಿತಾ ವಾಹನಗಳು ಗಸ್ತು ತಿರಗಲಿವೆ.

1,500 ಸಿಸಿಟೀವಿ: ಕಳೆದ ವರ್ಷದ ಯುವತಿಯರ ಮೇಲೆ ನಡೆದಿದೆ ಎನ್ನಲಾದ ಲೈಂಗಿಕ ದೌರ್ಜನ್ಯ ಪ್ರಕರಣ ಬೆಂಗಳೂರಿನ ಮರ್ಯಾದೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಾಜು ಹಾಕಿತ್ತು. ಹೀಗಾಗಿ ಸಾಕಷ್ಟು ಕ್ರಮ ಕೈಗೊಂಡಿರುವ ಪೊಲೀಸರು ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಡಿಕೆನ್ಸನ್ ರಸ್ತೆ, ಶಿವಾಜಿನಗರ, ಚರ್ಚ್ ಸ್ಟ್ರೀಟ್ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಪ್ರಸ್ತುತ ಇರುವ ಸಿಸಿಟಿವಿ ಸೇರಿದಂತೆ ಒಟ್ಟು 1,500 ಸಿಸಿಟಿವಿಯನ್ನು ಅಳವಡಿಸಿದ್ದಾರೆ. ಈ ಕ್ಯಾಮೆರಾಗಳು ಸುಮಾರು 150ರಿಂದ 200 ಮೀಟರ್ ದೂರದವರೆಗೆ ಸ್ಪಷ್ಟ ಚಿತ್ರಣವನ್ನು ಸೆರೆಹಿಡಿಯುವ ಸಾಮರ್ಥ್ಯ ಹೊಂದಿದ್ದು, 360 ಡಿಗ್ರಿ ಆ್ಯಂಗಲ್‌'ನಲ್ಲಿ ಕಾರ್ಯ ನಿರ್ವಹಿಸಲಿದೆ. ಈ ಕ್ಯಾಮೆರಾಗಳು ಕಾರ್ಯ ನಿರ್ವಹಿಸುವ ಬಗ್ಗೆ ಸಾರ್ವಜನಿಕರಿಗೆ ತಿಳಿಯುವುದಿಲ್ಲ.

ಚರ್ಚ್‌ಸ್ಟ್ರೀಟ್ ಪ್ರಕರಣ: 2014ರ ಡಿಸೆಂಬರ್ 28ರ ಸಂಜೆ ಹೊಸ ವರ್ಷದ ಸ್ವಾಗತದ ತಯಾರಿಯಲ್ಲಿದ್ದ ಚರ್ಚ್ ಸ್ಟ್ರೀಟ್‌'ನಲ್ಲಿ ಬಾಂಬ್ ಸ್ಫೋಟಗೊಂಡು ತಮಿಳುನಾಡು ಮೂಲದ ಭವಾನಿ ಅವರು ಮೃತಪಟ್ಟು, ಇಬ್ಬರು ಗಾಯಗೊಂಡಿದ್ದರು. ಪ್ರಕರಣದ ತನಿಖೆ ನಡೆಸಿದ ರಾಷ್ಟ್ರೀಯ ತನಿಖಾ ದಳ (ಎನ್‌'ಐಎ) ಪ್ರಮುಖ ಆರೋಪಿ ಆಲಂ ಜೆಬ್ ಆಫ್ರಿದಿಯನ್ನು 2016 ಜನವರಿ 29ರಂದು ಬಂಧಿಸಿದ್ದರು.