ಕೊಲ್ಕತ್ತಾ: ಸುಂದರಬನದಲ್ಲಿ ಏಡಿ ಹಿಡಿಯಲು ಹೋದ ಮಹಿಳೆಯನ್ನು ಹುಲಿ ಆಕ್ರಮಿಸಿದ್ದು, ಮಹಿಳೆ ಮೃತಪಟ್ಟಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ಏಡಿ ಹಿಡಿಯಲು ಹೋಗಿ ಹುಲಿ ದಾಳಿಗೆ ಒಳಗಾಗುತ್ತಿರುವ ಎರಡನೇ ಘಟನೆ ಇದಾಗಿದ್ದು, ಸೋಮವಾರವೂ ಇದೇ ರೀತಿಯ ಘಟನೆ ನಡೆದಿತ್ತು. ಅಂಬಜನ್ ಖತುನ್ (೩೭) ಸೇರಿದಂತೆ ನಾಲ್ಕು ಜನರು ಥಾಕುರನ್ ನದಿಯ ಬಳಿ ಏಡಿ ಹಿಡಿಯುತ್ತಿದ್ದರು. ಹುಲಿ ದಾಳಿ ನಡೆದಾಗ ಕೋಲುಗಳಿಂದ ಅಟ್ಟಿಸುವ ಪ್ರಯತ್ನ ನಡೆಸಿದಾಗ ಮಹಿಳೆಯ ದೇಹವನ್ನು ಬಿಟ್ಟು ಹುಲಿ ಓಡಿ ಹೋಗಿದೆ. ಅಂಬಜನ್ ಪತಿ ಅಯನ್ ಮೋಲ್ಲಾ ಅವರೂ ಏಡಿ ಹಿಡಿಯಲು ಬಂದಿದ್ದು, ಅವರು ಸುರಕ್ಷಿತರಾಗಿದ್ದಾರೆ.

ಸೋಮವಾರ ನಡೆದ ಇನ್ನೊಂದು ಘಟನೆಯಲ್ಲಿ ಏಡಿ ಹಿಡಿಯಲು ಹೋದ ಬನಲತಾ ದೇವಿ ಎಂಬ ಮಹಿಳೆಯ ಮೇಲೆ ಹುಲಿ ಆಕ್ರಮಿಸಿತ್ತು. ಈ ಘಟನೆ ಬಗ್ಗೆ ಆಕೆಯೊಂದಿಗೆ ಏಡಿ ಹಿಡಿಯಲು ಹೋಗಿದ್ದ ಆಕೆಯ ಇಬ್ಬರು ಮಕ್ಕಳು ಮಾಹಿತಿ ನೀಡಿದ್ದರು. ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಚಾಮರಾಜನಗರ: ಬೈಕ್ ಚೇಸ್ ಮಾಡಿದ ಹೆಬ್ಬುಲಿ, ವಿಡಿಯೋ ವೈರಲ್