ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ತವರು ಜಿಲ್ಲೆಯಲ್ಲಿ ಟಿಕೆಟ್’ಗಾಗಿ ವಾರ್ ಆರಂಭವಾಗಿದೆ. ಸಾಗರ - ಹೊಸನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್’ಗಾಗಿ ಯಡಿಯೂರಪ್ಪನವರ ಶಿಷ್ಯರ ನಡುವೆ ಪೈಪೋಟಿ ಆರಂಭವಾಗಿದೆ.
ಶಿವಮೊಗ್ಗ: ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ತವರು ಜಿಲ್ಲೆಯಲ್ಲಿ ಟಿಕೆಟ್’ಗಾಗಿ ವಾರ್ ಆರಂಭವಾಗಿದೆ. ಸಾಗರ - ಹೊಸನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್’ಗಾಗಿ ಯಡಿಯೂರಪ್ಪನವರ ಶಿಷ್ಯರ ನಡುವೆ ಪೈಪೋಟಿ ಆರಂಭವಾಗಿದೆ.
ಸಾಗರ ಕ್ಷೇತ್ರದ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಮತ್ತು ಹೊಸನಗರ ಕ್ಷೇತ್ರದ ಮಾಜಿ ಶಾಸಕ ಹಾಲಪ್ಪ ನಡುವೆ ವಾರ್ ನಡೆಯುತ್ತಿದೆ. ಇತ್ತೀಚೆಗೆ ಯಡಿಯೂರಪ್ಪ ಮಾಧ್ಯಮಗಳಿಗೆ ಹೇಳಿಕೆ ನೀಡಿ ಸೊರಬಕ್ಕೆ ಕುಮಾರ್ ಬಂಗಾರಪ್ಪ, ಸಾಗರಕ್ಕೆ ಹಾಲಪ್ಪ ಸ್ಪರ್ಧೆ ಮಾಡಲಿದ್ದು, ಗೋಪಾಲಕೃಷ್ಣಗೆ ಸೂಕ್ತ ಸ್ತಾನ ಮಾನ ನೀಡುವುದಾಗು ಹೇಳಿದ್ದರು.
ಈ ಹಿನ್ನೆಲೆಯಲ್ಲಿ ಶಿವಮೊಗ್ಗದ ಬಿಜೆಪಿ ಕಚೇರಿಗೆ ಬೇಳೂರು ಗೋಪಾಲ ಕೃಷ್ಣ ಬೆಂಬಲಿಗರ ನಿಯೋಗ ತೆರಳಿ ಸಾಗರ – ಹೊಸನಗರ ವಿಧಾನಸಭಾ ಕ್ಷೇತ್ರದ ಟಿಕೆಟ್ ನೀಡುವಂತೆ ಕೇಳಿದೆ. ಜಿಲ್ಲಾ ಕಚೇರಿಯಲ್ಲಿ ಆಯನೂರು ಮಂಜುನಾಥ್ ಹಾಗೂ ರಾಜ್ಯ ಕಾರ್ಯದರ್ಶಿ ದತ್ತಾತ್ರಿಯವರನ್ನು ಭೇಟಿ ಮಾಡಿದೆ. ಅಲ್ಲದೇ ಗೋಪಾಲಕೃಷ್ಣ ಅವರಿಗೆ ಟಿಕೆಟ್ ನೀಡಿದಲ್ಲಿ ಅವರನ್ನು ಗೆಲ್ಲಿಸುವುದು ಖಚಿತ ಎಂದು ಈ ವೇಳೆ ಹೇಳಿದ್ದಾರೆ.
ಈ ವೇಳೆ ಮಾತನಾಡಿದ ಆಯನೂರು ಮಂಜುನಾಥ್ ಸರ್ವೆ ಮೂಲಕ ಅಭ್ಯರ್ಥಿಗಳ ಆಯ್ಕೆನಡೆಯುತ್ತದೆ. ಅಲ್ಲಿಯವರೆಗೂ ತಾಳ್ಮೆಯಿಂದ ಇರುವಂತೆ ತಿಳಿಸಿದ್ದಾರೆ. ಈ ವಿಚಾರವನ್ನು ರಾಜ್ಯಾಧ್ಯಕ್ಷ ಮುಂದೆ ಇಡುವುದಾಗಿಯೂ ಕೂಡ ಅವರು ಭರವಸೆ ನೀಡಿದರು.
