Asianet Suvarna News Asianet Suvarna News

ಕಾಂಗ್ರೆಸ್ಸಲ್ಲಿ ಕೊನೇ ಕ್ಷಣದ ಟಿಕೆಟ್‌ ಲಾಬಿ

ವಿಧಾ​ನ​ಸಭಾ ಚುನಾ​ವ​ಣೆಗೆ ಕಾಂಗ್ರೆಸ್‌ ಅಭ್ಯ​ರ್ಥಿ​ಗಳ ಮೊದಲ ಪಟ್ಟಿಪ್ರಕ​ಟಿ​ಸುವ ಪ್ರಕ್ರಿ​ಯೆ​ಯನ್ನು ಹೈಕ​ಮಾಂಡ್‌ ಆರಂಭಿ​ಸುವ ದಿನ ಸಮೀ​ಪಿ​ಸು​ತ್ತಿ​ರು​ವಂತೆಯೇ ಆಕಾಂಕ್ಷಿ​ಗ​ಳಲ್ಲಿ ಟಿಕೆ​ಟ್‌​ಗಾಗಿ ಲಾಬಿ ತೀವ್ರ​ಗೊಂಡಿದೆ. ವಿಶೇ​ಷ​ವಾಗಿ ಪ್ರಮುಖ ನಾಯ​ಕರು ತಮ್ಮ ಹಿಂಬಾ​ಲ​ಕ​ರಿಗೆ ಟಿಕೆಟ್‌ ಕೊಡಿ​ಸಲು ಹೈಕ​ಮಾಂಡ್‌ನ ಮುಖ್ಯ ಮುಖಂಡ​ರ ಮೇಲೆ ಪ್ರಭಾವ ಬೀರುವ ಪ್ರಯತ್ನ ಆರಂಬಿ​ಸಿ​ದ್ದಾ​ರೆ.

Ticket Labhi In Congress

ಬೆಂಗ​ಳೂರು: ವಿಧಾ​ನ​ಸಭಾ ಚುನಾ​ವ​ಣೆಗೆ ಕಾಂಗ್ರೆಸ್‌ ಅಭ್ಯ​ರ್ಥಿ​ಗಳ ಮೊದಲ ಪಟ್ಟಿಪ್ರಕ​ಟಿ​ಸುವ ಪ್ರಕ್ರಿ​ಯೆ​ಯನ್ನು ಹೈಕ​ಮಾಂಡ್‌ ಆರಂಭಿ​ಸುವ ದಿನ ಸಮೀ​ಪಿ​ಸು​ತ್ತಿ​ರು​ವಂತೆಯೇ ಆಕಾಂಕ್ಷಿ​ಗ​ಳಲ್ಲಿ ಟಿಕೆ​ಟ್‌​ಗಾಗಿ ಲಾಬಿ ತೀವ್ರ​ಗೊಂಡಿದೆ. ವಿಶೇ​ಷ​ವಾಗಿ ಪ್ರಮುಖ ನಾಯ​ಕರು ತಮ್ಮ ಹಿಂಬಾ​ಲ​ಕ​ರಿಗೆ ಟಿಕೆಟ್‌ ಕೊಡಿ​ಸಲು ಹೈಕ​ಮಾಂಡ್‌ನ ಮುಖ್ಯ ಮುಖಂಡ​ರ ಮೇಲೆ ಪ್ರಭಾವ ಬೀರುವ ಪ್ರಯತ್ನ ಆರಂಬಿ​ಸಿ​ದ್ದಾ​ರೆ.

ಮೂಲ​ಗಳ ಪ್ರಕಾರ ಸುಮಾರು 120ರಿಂದ 150 ಮಂದಿಯ ಅಭ್ಯ​ರ್ಥಿ​ಗಳ ಪಟ್ಟಿ​ಯನ್ನು ಕಾಂಗ್ರೆಸ್‌ ಹೈಕ​ಮಾಂಡ್‌ ಏ.15ರೊಳಗೆ (ಘೋಷಣೆ 14ಕ್ಕೆ ಹೊರ​ಬೀ​ಳ​ಬ​ಹುದು ಎನ್ನಲಾ​ಗು​ತ್ತಿ​ದೆ) ಪ್ರಕ​ಟ​ವಾ​ಗ​ಲಿದೆ. ಈ ಹಿನ್ನೆ​ಲೆ​ಯಲ್ಲಿ ಏ.8 ಹಾಗೂ 9ರಂದು ಎಐ​ಸಿಸಿ ಸ್ಕ್ರೀನಿಂಗ್‌ ಕಮಿಟಿ ಸಭೆ ದೆಹ​ಲಿ​ಯಲ್ಲಿ ನಡೆ​ಯ​ಲಿದೆ. ಇದರ ಬೆನ್ನಲ್ಲೇ ಅಂದರೆ 12 ಹಾಗೂ 13ರಂದು ದೆಹ​ಲಿ​ಯಲ್ಲಿ ಕೇಂದ್ರ ಚುನಾ​ವಣಾ ಸಮಿತಿ ಸಭೆ ನಡೆ​ಯ​ಲಿದೆ. ಈ ಸಭೆಯಲ್ಲಿ ಸುಮಾರು 120ರಿಂದ 150 ಮಂದಿ ಅಭ್ಯ​ರ್ಥಿ​ಗಳ ಹೆಸರು ಅಖೈ​ರು​ಗೊ​ಳ್ಳು​ವುದು ಖಚಿತ ಎಂದೇ ಹೇಳ​ಲಾ​ಗು​ತ್ತಿ​ದೆ.

ಈ ಹಿನ್ನೆ​ಲೆ​ಯಲ್ಲಿ ರಾಜ್ಯದ ಹಲವು ನಾಯ​ಕರು ತಮ್ಮ ಹಿಂಬಾ​ಲ​ಕ​ರಿಗೆ ಟಿಕೆಟ್‌ ಕೊಡಿ​ಸಲು ತೀವ್ರ ಪ್ರಯತ್ನ ಆರಂಭಿ​ಸಿ​ದ್ದಾರೆ. ರಾಜ್ಯ ಉಸ್ತು​ವಾರಿ ವೇಣುಗೋ​ಪಾಲ್‌ ಸೋಮ​ವಾರ ಬೆಂಗ​ಳೂ​ರಿ​ನಲ್ಲಿ ಬೀಡುಬಿಟ್ಟಿದ್ದ ಹಿನ್ನೆ​ಲೆ​ಯಲ್ಲಿ ಅವ​ರನ್ನು ಹಲವು ಪ್ರಮುಖ ನಾಯ​ಕರು ಭೇಟಿ ಮಾಡಿ ತಮ್ಮ ಜಿಲ್ಲೆ​ಗ​ಳಲ್ಲಿ ಯಾರಿಗೆ ಟಿಕೆಟ್‌ ನೀಡ​ಬೇಕು ಹಾಗೂ ಯಾರಿಗೆ ಟಿಕೆಟ್‌ ನೀಡ​ಬಾ​ರದು ಎಂದು ನೇರಾ​ನೇರ ಪ್ರಭಾವ ಬೀರಲು ಯತ್ನಿ​ಸಿದ್ದು ಕುತೂ​ಹ​ಲ​ಕ​ರ​ವಾ​ಗಿ​ತ್ತು.

ಸಚಿ​ವ​ರಾದ ಆರ್‌.ವಿ.ದೇಶ​ಪಾಂಡೆ, ಪ್ರಿಯಾಂಕ್‌ ಖರ್ಗೆ, ಶರ​ಣ​ಪ್ರ​ಕಾಶ್‌ ಪಾಟೀಲ್‌, ಎ. ಮಂಜು ಸೇರಿ​ದಂತೆ ಹಲವು ನಾಯ​ಕರು ವೇಣು​ಗೋ​ಪಾಲ್‌ ಅವ​ರನ್ನು ಭೇಟಿ ಮಾಡಿ ಮಾತ​ನಾ​ಡಿ​ದರು. ಅಲ್ಲದೆ, ಹತ್ತಾರು ಮಂದಿ ಟಿಕೆಟ್‌ ಆಕಾಂಕ್ಷಿಗಳು ಸಹ ವೇಣು​ಗೋ​ಪಾಲ್‌ ಅವ​ರನ್ನು ಭೇಟಿ ಮಾಡಿ ತಮ್ಮ ಅಹ​ವಾಲು ಸಲ್ಲಿ​ಸಿ​ದ​ರು.

ಈ ನಡುವೆ ಕೆಪಿ​ಸಿ​ಸಿಯು ಸುಮಾರು 150 ಕ್ಷೇತ್ರ​ಗ​ಳಿಗೆ ಪ್ಯಾನೆಲ್‌ ಸಿದ್ಧಪ​ಡಿ​ಸಿದೆ. ಈ ಪ್ಯಾನೆಲ್‌ ಅನ್ನು ಶೀಘ್ರವೇ ಹೈಕ​ಮಾಂಡ್‌ಗೆ ತಲು​ಪಿ​ಸ​ಲಿದೆ. ಆದರೆ, ಈ ಪ್ಯಾನೆ​ಲ್‌ ಬಗ್ಗೆಯೇ ಹಲವು ಪ್ರಮುಖ ನಾಯ​ಕ​ರಿಗೆ ಅಸ​ಮಾ​ಧಾ​ನ​ವಿದ್ದು, ಇಂತಹ ನಾಯ​ಕರ ಪೈಕಿ ಕೆಲ​ವರು ನೇರ​ವಾಗಿ ವೇಣು​ಗೋ​ಪಾಲ್‌ ಭೇಟಿ ಮಾಡಿ ತಮ್ಮ ಅಭಿ​ಪ್ರಾಯ ತಿಳಿ​ಸಿ​ದರೆ ಮತ್ತೆ ಕೆಲ​ವರು ನೇರ​ವಾಗಿ ಹೈಕ​ಮಾಂಡ್‌ನ ಪ್ರಭಾವಿ ನಾಯ​ಕರ ಬಳಿಗೆ ದೂರು ಒಯ್ದಿ​ದ್ದಾರೆ ಎಂದು ಮೂಲ​ಗಳು ತಿಳಿ​ಸಿ​ವೆ.

Follow Us:
Download App:
  • android
  • ios