ನಕ್ಷ ಮತ್ತು ನೀಶು ಎಂಬುವರೇ ಸಾವನ್ನಪ್ಪಿದ ಕಂದಮ್ಮಗಳು. ವಾಷಿಂಗ್ ಮಶಿನ್ನಿನಲ್ಲಿ ನೀರು ತುಂಬಿದ ತಾಯಿಯು ಡಿಟರ್ಜಂಟ್ ತರಲು ಅಂಗಡಿಗೆ ಹೋದಾಗ ಈ ಬಾಲಕರು ಮಶಿನ್ ಹತ್ತಿದ್ದಾರೆ. ಆಗ ಅದರಲ್ಲಿ 15 ಲೀ. ನೀರು ಇತ್ತು. ವಾಷಿಂಗ್ ಮಶಿನ್ನಿನ ಬಾಯಿಯಲ್ಲಿ ಆಟವಾಡಲು ಇದೇ ವೇಳೆ ಬಾಲಕರು ಇಳಿದಿದ್ದಾರೆ. ತಾಯಿ ಮನೆಗೆ ವಾಪಸ್ ಬಂದಾಗ ಬಾಲಕರು ಕಾಣಿಸಿಲ್ಲ.

ನವದೆಹಲಿ(ಫೆ.25): ಟಾಪ್ ಲೋಡ್ ವಾಷಿಂಗ್ ಮಶಿನ್‌ನಲ್ಲಿ ಮುಳುಗಿ 3 ವರ್ಷದ ಅವಳಿ ಮಕ್ಕಳು ಸಾವನ್ನಪ್ಪಿದ ದಾರುಣ ಘಟನೆ ದಿಲ್ಲಿಯ ರೋಹಿಣಿ ಪ್ರದೇಶದಲ್ಲಿ ಶನಿವಾರ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಕ್ಷ ಮತ್ತು ನೀಶು ಎಂಬುವರೇ ಸಾವನ್ನಪ್ಪಿದ ಕಂದಮ್ಮಗಳು. ವಾಷಿಂಗ್ ಮಶಿನ್ನಿನಲ್ಲಿ ನೀರು ತುಂಬಿದ ತಾಯಿಯು ಡಿಟರ್ಜಂಟ್ ತರಲು ಅಂಗಡಿಗೆ ಹೋದಾಗ ಈ ಬಾಲಕರು ಮಶಿನ್ ಹತ್ತಿದ್ದಾರೆ. ಆಗ ಅದರಲ್ಲಿ 15 ಲೀ. ನೀರು ಇತ್ತು. ವಾಷಿಂಗ್ ಮಶಿನ್ನಿನ ಬಾಯಿಯಲ್ಲಿ ಆಟವಾಡಲು ಇದೇ ವೇಳೆ ಬಾಲಕರು ಇಳಿದಿದ್ದಾರೆ. ತಾಯಿ ಮನೆಗೆ ವಾಪಸ್ ಬಂದಾಗ ಬಾಲಕರು ಕಾಣಿಸಿಲ್ಲ. ಆಗ ಅವರನ್ನು ಆತಂಕಗೊಂಡ ಆಕೆ ತನ್ನ ಪತಿಗೆ ಫೋನ್ ಮಾಡಿದ್ದಾಳೆ. ಪತಿ ಮನೆಗೆ ಆಗಮಿಸಿ ಹುಡುಕಾಡಿದಾಗ ಕೊನೆಗೆ ವಾಷಿಂಗ್ ಮಶಿನ್‌ನಲ್ಲಿ ಮೃತ ಅವಸ್ಥೆಯಲ್ಲಿ ಬಾಲಕರು ಪತತ್ತೆಯಾಗಿದ್ದಾರೆ. ಬಾಲಕರ ಸಾವನ್ನು ಬಳಿಕ ವೈದ್ಯರು ಖಚಿತಪಡಿಸಿದ್ದಾರೆ.

ಅರ್ಧ ಗಂಟೆ ಅವಧಿಯಲ್ಲಿ ಈ ಎಲ್ಲ ಘಟನೆ ನಡೆದುಹೋಗಿದೆ. ಈಗ ತಂದೆ ರವೀಂದರ್, ತಾಯಿ ರೇಖಾ ಗೋಳು ಹೇಳತೀರದಾಗಿದೆ.