110 ಅಡಿ ಆಳದ ಕೊಳವೆ ಬಾವಿಗೆ ಬಿದ್ದ 3 ವರ್ಷದ ಬಾಲಕಿ

First Published 1, Aug 2018, 8:28 PM IST
Three-year-old girl rescued after falling into 110-feet borewell in Munger
Highlights

ನಳಿಕೆಯ ಮೂಲಕ ಕೊಳವೆಬಾವಿಗೆ ಆಮ್ಲಜನಕ ರವಾನಿಸಲಾಗಿದೆ.  ಬಾಲಕಿಯು ತನ್ನ ಪೋಷಕರ ಜೊತೆ ಪ್ರತಿಕ್ರಿಯಿಸುತ್ತಿದ್ದು ಆಹಾರ ಪೊಟ್ಟಣಗಳನ್ನು ನೀಡಲಾಗುತ್ತಿದೆ. 

ಪಾಟ್ನಾ[ಆ.01]: ಮೂರು ವರ್ಷದ ಬಾಲಕಿಯೊಬ್ಬಳು 110 ಅಡಿ ಆಳದ ಕೊಳವೆ ಬಾವಿಗೆ ಬಿದ್ದಿರುವ ಘಟನೆ ಬಿಹಾರದ ಮುಗೇರ್ ಜಿಲ್ಲೆಯಲ್ಲಿ ನಡೆದಿದೆ.

ಸನ್ನೋ ಕೊಳವೆ ಬಾವಿಯಲ್ಲಿರುವ ಬಾಲಕಿ. ಬಾಲಕಿಯನ್ನು ಮೇಲಕ್ಕೆತ್ತುವ ಪರಿಹಾರ ಕಾರ್ಯಾಚರಣೆ ಮುಂದುವರಿದಿದ್ದು ಅಗ್ನಿಶಾಮಕ ದಳ, ಸ್ಥಳೀಯ ಪೊಲೀಸರು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.    

ನಳಿಕೆಯ ಮೂಲಕ ಕೊಳವೆಬಾವಿಗೆ ಆಮ್ಲಜನಕ ರವಾನಿಸಲಾಗಿದೆ.  ಬಾಲಕಿಯು ತನ್ನ ಪೋಷಕರ ಜೊತೆ ಪ್ರತಿಕ್ರಿಯಿಸುತ್ತಿದ್ದು ಆಹಾರ ಪೊಟ್ಟಣಗಳನ್ನು ನೀಡಲಾಗುತ್ತಿದೆ. ಬಿಹಾರದ ಮುಂಗೇರ್​ ಎಂಬಲ್ಲಿ  ನಡೆದಿದೆ. ಮಂಗಳವಾರ ಮಧ್ಯಾಹ್ನ ಸನಾ ಎಂಬ ಬಾಲಕಿ ಅಜ್ಜಿ ಮನೆಗೆ ತೆರಳಿ ಆಟವಾಡುತ್ತಿತ್ತು. ಮನೆ ಬಾಗಿಲ ಮುಂದೆ ಕೊಳವೆ ಬಾವಿಯೊಂದು ಇದೆ. ಆಟವಾಡುತ್ತಿದ್ದ ಸಮಯದಲ್ಲಿ ಆಕಸ್ಮಿಕವಾಗಿ ಮಗು ಆ ಕೊಳವೆ ಬಾವಿಗೆ ಬಿದ್ದಿದೆ. ಮೇಲಕ್ಕೆ ಕರೆತರುವ ಎಲ್ಲ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಜಿಲ್ಲಾ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

loader