ಯುಪಿಏ ಆಡಳಿತಾವಧಿಯಲ್ಲಿ 2009-13ರವರೆಗೆ 3 ಬಾರಿ ಸರ್ಜಿಕಲ್ ದಾಳಿಗಳು ನಡೆದಿದ್ದವು , ಆದರೆ ಸರ್ಕಾರ ಅದನ್ನು ಪ್ರಚಾರಪಡಿಸಲಿಲ್ಲವೆಂದು ಶಿಂಧೆ ಹೇಳಿದ್ದಾರೆ.
ಮುಂಬೈ (ಫೆ.04): ಯುಪಿಏ ಆಡಳಿತಾವಧಿಯಲ್ಲಿ 3 ಸರ್ಜಿಕಲ್ ದಾಳಿಗಳು ನಡೆದಿತ್ತು ಎಂದು ಮಾಜಿ ಗೃಹಮಂತ್ರಿ ಸುಶೀಲ್ ಕುಮಾರ್ ಶಿಂಧೆ ಹೇಳಿದ್ದಾರೆ.
ಯುಪಿಏ ಆಡಳಿತಾವಧಿಯಲ್ಲಿ 2009-13ರವರೆಗೆ 3 ಬಾರಿ ಸರ್ಜಿಕಲ್ ದಾಳಿಗಳು ನಡೆದಿದ್ದವು , ಆದರೆ ಸರ್ಕಾರ ಅದನ್ನು ಪ್ರಚಾರಪಡಿಸಲಿಲ್ಲವೆಂದು ಶಿಂಧೆ ಹೇಳಿದ್ದಾರೆ.
ಯುಪಿಏ ಸರ್ಕಾರ ಆ ದಾಳಿಗಳನ್ನು ಬಹಿರಂಗಪಡಿಸಲಿಲ್ಲ, ಆದರೆ ಮೋದಿ ಸರ್ಕಾರ ಸೇನೆಯ ಕಾರ್ಯಾಚರಣೆಯನ್ನು ಬಂಡವಾಳವಾಗಿ ಬಳಸಿ, ಜನರನ್ನು ತಪ್ಪು ದಾರಿಗೆಳೆಯುತ್ತಿದೆ ಎಂದು ಶಿಂಧೆ ಹೇಳಿದ್ದಾರೆ.
ಸೆ, 29ರಂದು ಭಾರತೀಯ ಸೇನೆ ಪಾಕಿಸ್ತಾನದೊಳಗೆ ರಹಸ್ಯವಾಗಿ ಪ್ರವೇಶಿಸಿ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿತ್ತು.